ADVERTISEMENT

Covid-19 World Update | 1 ಕೋಟಿ ಸೋಂಕಿತರು ಗುಣಮುಖ; 6.82 ಲಕ್ಷ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2020, 1:25 IST
Last Updated 2 ಆಗಸ್ಟ್ 2020, 1:25 IST
   

ವಾಷಿಂಗ್ಟನ್: ಜಗತ್ತಿನಾದ್ಯಂತ 1,77,59,332 ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಇದರಲ್ಲಿ 1,04,84,442 ಸೋಂಕಿತರು ಗುಣಮುಖರಾಗಿದ್ದಾರೆ.6,82,855 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ಸಂಪನ್ಮೂಲ ಕೇಂದ್ರ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈ ವರೆಗೆ 46,17,494 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 14,61,885 ಸೋಂಕಿತರು ಗುಣಮುಖರಾಗಿದ್ದು, 1,54,319 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕ ನಂತರ ಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌ನಲ್ಲಿ 27,07,877 ಪ್ರಕರಣಗಳು ಬೆಳಕಿಗೆ ಬಂದಿವೆ. 20,37,982 ಸೋಂಕಿತರು ಗುಣಮುಖರಾಗಿದ್ದು, 93,563 ಜನರು ಮೃತಪಟ್ಟಿದ್ದಾರೆ.

ADVERTISEMENT

ರಷ್ಯಾದಲ್ಲಿ 8,43,890, ದಕ್ಷಿಣ ಆಫ್ರಿಕಾದಲ್ಲಿ 5,03,290, ಮೆಕ್ಸಿಕೋದಲ್ಲಿ4,24,637 ಪೆರುವಿನಲ್ಲಿ 4,07,492, ಚಿಲಿಯಲ್ಲಿ3,57,658 ಪ್ರಕರಣಗಳು ವರದಿಯಾಗಿವೆ.

ಜಗತ್ತಿನಲ್ಲೇ ಮೊದಲು ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಈ ವರೆಗೆ87,779 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ4,667 ಸೋಂಕಿತರು ಮೃತಪಟ್ಟಿದ್ದು,80,894 ಗುಣಮುಖರಾಗಿದ್ದಾರೆ. ಇನ್ನು ಕೇವಲ2,218 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿಯಾಗಿದೆ.

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ 2,78,305 ಪ್ರಕರಣಗಳು ದೃಢಪಟ್ಟಿದ್ದು,247,177 ಸೋಂಕಿತರು ಗುಣಮುಖರಾಗಿದ್ದಾರೆ.5,951 ಮಂದಿ ಸಾವಿಗೀಡಾಗಿದ್ದಾರೆ.ಇಂಗ್ಲೆಂಡ್‌ನಲ್ಲಿ 3,05,572, ಸ್ಪೇನ್‌ನಲ್ಲಿ 2,88,522 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 46,278, ಮೆಕ್ಸಿಕೊದಲ್ಲಿ 46,688, ಇಟಲಿಯಲ್ಲಿ 35,146, ಪ್ರಾನ್ಸ್‌ನಲ್ಲಿ 30,268, ಸ್ಪೇನ್‌ನಲ್ಲಿ 28,445, ಪೆರುವಿನಲ್ಲಿ 19,021, ಇರಾನ್‌ನಲ್ಲಿ16,982, ರಷ್ಯಾದಲ್ಲಿ 14,034, ಚಿಲಿಯಲ್ಲಿ 9,533 ಮತ್ತು ದಕ್ಷಿಣ ಆಫ್ರಿಕಾದಲ್ಲಿ 8,153 ಜನರು ಸಾವಿಗೀಡಾಗಿದ್ದಾರೆ.

ಭಾರತದಲ್ಲಿ ಕೋವಿಡ್–19
ಭಾರತದಲ್ಲಿ ಆಗಸ್ಟ್‌ 1ರ ವರೆಗೆ 16,95,988 ಜನರಿಗೆ ಸೋಂಕು ತಗುಲಿದೆ. ಸಾವಿನ ಸಂಖ್ಯೆ 36,511ಕ್ಕೆ ಏರಿಕೆಯಾಗಿದ್ದು, ಇದುವರೆಗೆ ಒಟ್ಟು 10,94,374 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 5,65,103 ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.