ADVERTISEMENT

Covid-19 World Update: ವಿಶ್ವದಲ್ಲಿ ಸೋಂಕಿತರ ಸಂಖ್ಯೆ 1.19ಕೋಟಿ

ಏಜೆನ್ಸೀಸ್
Published 8 ಜುಲೈ 2020, 5:58 IST
Last Updated 8 ಜುಲೈ 2020, 5:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್ (ಅಮೆರಿಕಾ): ಕೊರೊನಾ ಸೋಂಕು ವಿಶ್ವದ 213 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಬುಧವಾರ ಬೆಳಗಿನಜಾವದವರಗೆ
1.19ಕೋಟಿ ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಈ ರೋಗದಿಂದ 69 ಲಕ್ಷ ಮಂದಿ ಗುಣಮುಖರಾಗಿದ್ದರೆ, 45 ಲಕ್ಷ ಮಂದಿ ಈ ರೋಗದಿಂದ ಇನ್ನೂ ಆಸ್ಪತ್ರೆ, ತಾತ್ಕಾಲಿಕ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಪ್ರಪಂಚದಲ್ಲಿ ಒಟ್ಟು 12,826 ಹೊಸ ಪ್ರಕರಣಗಳು ದಾಖಲಾಗಿವೆ. ವಿಶ್ವದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5.46 ಲಕ್ಷಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಇನ್ನೂ ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಲೇ ಇವೆ. ಕಳೆದ ರಾತ್ರಿ 7 ಹೊಸ ಪ್ರಕರಣಗಳು ವರದಿಯಾಗಿವೆ. ಚೀನಾದಲ್ಲಿ ಒಟ್ಟು 83,426 ಪ್ರಕರಣಗಳು ಇಲ್ಲಿಯವರೆಗೆ ವರದಿಯಾಗಿದ್ದರೆ, ಒಟ್ಟು 4,634 ಮಂದಿ ಸಾವನ್ನಪ್ಪಿದ್ದಾರೆ. 78, 548 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಚೀನಾದಲ್ಲಿ ಕೇವಲ 390 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಈ ಅಂಕಿಅಂಶಗಳಿಂದಾಗಿ ಇಡೀ ಜಗತ್ತಿಗೇ ಸೋಂಕು ತಗುಲಿಸಿದ ಚೀನಾದಲ್ಲಿ ಕೊರೊನಾ ವೈರಸ್‌ ಸಂಪೂರ್ಣ ನಿಯಂತ್ರಣದಲ್ಲಿದೆ ಎಂಬುದು ತಿಳಿದುಬರುತ್ತದೆ. ಕೊರೊನಾ ಸೋಂಕು ಹರಡುವುದನ್ನು ಬಹಳ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ತಡೆದಿರುವ ಚೀನಾ 8ನೇ ಸ್ಥಾನದಿಂದ ಈಗ 22ನೇ ಸ್ಥಾನದಲ್ಲಿ ಬಂದು ನಿಂತಿದೆ.

ADVERTISEMENT

ಭಾರತ ಆರಂಭದಲ್ಲಿ 8 ರಿಂದ 10ನೇ ಸ್ಥಾನದಲ್ಲಿತ್ತು. ಈಗ ಸಾವಿನ ಪ್ರಮಾಣದಲ್ಲಿ ಏರಿಕೆ, ವರದಿಯಾಗುತ್ತಿರುವ ಪ್ರಕರಣಗಳಲ್ಲಿ ಏರಿಕೆ ಸೇರಿದಂತೆ ಒಟ್ಟು ವಿಶ್ವ ಸಂಸ್ಥೆಯ ಅಂದಾಜಿನಂತೆ ಕೊರೊನಾ ಸೋಂಕಿನ ಲೆಕ್ಕಾಚಾರದಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು ವರದಿಯಾದ ಪ್ರಕರಣಗಳು 743, 481. ಇಲ್ಲಿಯವರೆಗೆ ಗುಣಮುಖರಾದವರ ಸಂಖ್ಯೆ 4.5 ಲಕ್ಷ ಮಂದಿ. ಒಟ್ಟು ಸಾವಿನ ಸಂಖ್ಯೆ 20, 653ಕ್ಕೆ ಏರಿಕೆಯಾಗಿದೆ. ಭಾರತದ ಜನಸಂಖ್ಯೆ 138 ಕೋಟಿ.

ಮೊದಲ ಸ್ಥಾನದಲ್ಲಿ ಅಮೆರಿಕಾ ಇದ್ದು, 30 ಲಕ್ಷ ಪ್ರಕರಣಗಳು ವರದಿಯಾಗಿವೆ. 33 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಒಟ್ಟು ಸಾವಿನ ಸಂಖ್ಯೆ 66,868ಕ್ಕೆ ಏರಿಕೆಯಾಗಿದೆ. 13 ಲಕ್ಷ ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 15 ಸಾವಿರ ಮಂದಿ ಸ್ಥಿತಿ ಗಂಭೀರವಾಗಿದೆಎಂದು ವಿಶ್ವಸಂಸ್ಥೆ ವರದಿ ಮಾಡಿದೆ.

ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದ್ದು, ಇಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 16ಲಕ್ಷ. ಸಾವಿನ ಸಂಖ್ಯೆ 66 ಸಾವಿರ. 11 ಲಕ್ಷ ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 4.8 ಲಕ್ಷ ಪ್ರಕರಣಗಳು ಇನ್ನೂ ಸಕ್ರಿಯವಾಗಿವೆ. ಬ್ರೆಜಿಲ್ ಜನಸಂಖ್ಯೆ 21 ಕೋಟಿ.
ರಷ್ಯಾದಲ್ಲಿ ಒಟ್ಟು 6.94 ಲಕ್ಷ ಪ್ರಕರಣಗಳು ಇದುವರೆಗೆ ವರದಿಯಾಗಿದ್ದು, ಸಾವಿನ ಸಂಖ್ಯೆ 10 ಸಾವಿರಕ್ಕೆ ಏರಿಕೆಯಾಗಿದೆ. ಇಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 4.6 ಲಕ್ಷ. ಜನಸಂಖ್ಯೆ 14 ಕೋಟಿ.

ಪಾಕಿಸ್ತಾನದಲ್ಲಿ ಇದುವರೆಗೆ 2.3 ಲಕ್ಷ ಪ್ರಕರಣಗಳು ವರದಿಯಾಗಿವೆ. ಇಲ್ಲಿ ಒಟ್ಟು ಸಾವಿನ ಸಂಖ್ಯೆ 4,922 ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ 1.6 ಲಕ್ಷ ಮಂದಿ. 72 ಸಾವಿರ ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.