ADVERTISEMENT

ಬ್ರಿಟನ್‌ನಲ್ಲಿ ಡೆಲ್ಟಾಕ್ರಾನ್‌ ತಳಿ ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 12:27 IST
Last Updated 18 ಫೆಬ್ರುವರಿ 2022, 12:27 IST
virus
virus   

ಲಂಡನ್: ಕೊರೊನಾ ವೈರಸ್‌ನ ಡೆಲ್ಟಾ ಹಾಗೂ ಓಮೈಕ್ರಾನ್‌ ತಳಿಗಳ ಗುಣಲಕ್ಷಣಗಳನ್ನು ಹೊಂದಿರುವ ಹೈಬ್ರಿಡ್‌ ತಳಿ ‘ಡೆಲ್ಟಾಕ್ರಾನ್’ ಸೋಂಕಿನ ಪ್ರಕರಣಗಳು ಬ್ರಿಟನ್‌ನಲ್ಲಿ ವರದಿಯಾಗಿದೆ. ಇದು ‘ಕಳವಳಕಾರಿ ತಳಿ’ ಎಂದು ವಿಶ್ವದ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

‘ಪರೀಕ್ಷೆಗೆ ಒಳಪಡಿಸಿದ ಮಾದರಿಗಳಲ್ಲಿ ರೂಪಾಂತರಿ ಹೈಬ್ರಿಡ್‌ ತಳಿ ಡೆಲ್ಟಾಕ್ರಾನ್‌ ಸೋಂಕು ಇರುವುದು ಪತ್ತೆಯಾಗಿದೆ. ಈ ಸೋಂಕು ಪ್ರಸರಣದ ಬಗ್ಗೆ ಕಣ್ಗಾವಲಿರಿಸಲಾಗಿದೆ’ ಎಂದು ಬ್ರಿಟನ್‌ನ ಆರೋಗ್ಯ ಸಂಸ್ಥೆ (ಯುಕೆಎಚ್‌ಎಸ್‌ಎ) ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಆದರೆ, ಡೆಲ್ಟಾಕ್ರಾನ್‌ ತಳಿ ಸೋಂಕಿನ ತೀವ್ರತೆ ಎಷ್ಟು, ಸೋಂಕಿತ ವ್ಯಕ್ತಿಯಲ್ಲಿ ಕಂಡುಬರುವ ಲಕ್ಷಣಗಳ ಬಗ್ಗೆ ಸಂಸ್ಥೆಯು ಹೆಚ್ಚಿನ ವಿವರಗಳನ್ನು ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.