ADVERTISEMENT

Covid-19 World Update | ಸೋಂಕಿನ 2ನೇ ಅಲೆಯ ಆತಂಕ, ಚೇತರಿಕೆಯಲ್ಲಿ ಹೆಚ್ಚಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2020, 16:41 IST
Last Updated 31 ಜುಲೈ 2020, 16:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್:ಜಗತ್ತಿನಾದ್ಯಂತ ಕೊರೊನಾ ಸೋಂಕಿನ ಏರಿಕೆ ಮುಂದುವರೆದಿದ್ದು ಬ್ರಿಟನ್‌, ರಷ್ಯಾ ಸೇರಿದಂತೆ ಯುರೋಪ್‌ ದೇಶಗಳಲ್ಲಿ ಸೋಂಕಿನ ಎರಡನೇ ಅಲೆಯ ಆತಂಕ ಎದುರಾಗಿದೆ.

ಸ್ಪೇನ್‌, ಸಿಂಗಾಪುರ್, ಜರ್ಮನಿ, ದಕ್ಷಿಣ ಕೊರಿಯಾ ಸೇರಿದಂತೆ ಯುರೋಪ್‌ ದೇಶಗಳಲ್ಲಿ ಸೋಂಕಿನ ಎರಡನೇಯ ಅಲೆಯ ಭೀತಿ ಎದುರಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಆದರೆ ಇದಕ್ಕೆ ಪೂರಕವಾದ ಪುರಾವೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಸಹ ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದೆ.

ಎರಡನೇ ಪ್ರಪಂಚ ಯುದ್ಧದ ಬಳಿಕ ಜಾಗತಿಕವಾಗಿ ಸ್ಪಾನಿಶ್‌ ಸೋಂಕು ಹರಡಿತ್ತು. ಆದರೆ ಮೊದಲ ಅಲೆಗಿಂತ ಎರಡನೇ ಅಲೆ ತುಂಬಾ ಭೀಕರವಾಗಿತ್ತು ಎಂದು ಬ್ರಿಟನ್‌ ವಿಜ್ಞಾನಿಗಳು ಹೇಳಿದ್ದಾರೆ.

ADVERTISEMENT

ಶುಕ್ರವಾರ ರಾತ್ರಿ 10 (ಭಾರತೀಯ ಕಾಲಮಾನ)ವರೆಗೂ ಜಾಗತಿಕವಾಗಿ ಕೊರೊನಾ ಸೋಂಕಿತರ ಸಂಖ್ಯೆ 1,75,90,947ಕ್ಕೆ ಏರಿದ್ದು, 6,78,951 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ 1,10,10,131 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರ್ಡೊಮೀಟರ್‌ ಮಾಹಿತಿ ನೀಡಿದೆ.

ಎಂದಿನಂತೆ ಅಮೆರಿಕ 46,55,611 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. ಸದ್ಯ ಅಮೆರಿಕದಲ್ಲಿ 1,55,746 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 22,86,492 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 26,13,789 ಪ್ರಕರಣಗಳು ಪತ್ತೆಯಾಗಿವೆ. 18,24,095 ಸೋಂಕಿತರು ಗುಣಮುಖರಾಗಿದ್ದು, 91,377ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 16,90,546 ಪ್ರಕರಣಗಳು ದೃಢಪಟ್ಟಿದ್ದು, 10,91,018 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ವರೆಗೂ 36,497 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ರಷ್ಯಾದಲ್ಲಿ 8,39,981, ದಕ್ಷಿಣ ಆಫ್ರಿಕಾದಲ್ಲಿ 4,82,169, ಪೆರುವಿನಲ್ಲಿ 4,07,492, ಚಿಲಿಯಲ್ಲಿ 3,53,536 ಇಂಗ್ಲೆಂಡ್‌ನಲ್ಲಿ 3,02,301,ಇರಾನ್‌ನಲ್ಲಿ 3,01,530 ಮತ್ತು ಸ್ಪೇನ್‌ನಲ್ಲಿ 3,35,602 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಸಕ್ರಿಯ ಪ್ರಕರಣಗಳಲ್ಲಿ ಚೇತರಿಕೆ ಪ್ರಮಾಣವು ಹೆಚ್ಚಳವಾಗುತ್ತಿದೆ. ಲಸಿಕೆ ಮತ್ತು ಔಷಧಿಯ ಬರುವಿಕೆಯ ಸುದ್ದಿಯಿಂದ ಸೋಂಕಿತರ ಮಾನಸಿಕ ಆರೋಗ್ಯವು ಚೇತರಿಕೆ ಪ್ರಮಾಣ ಹೆಚ್ಚಾಗಲು ಕಾರಣ ಎಂದು ತಜ್ಞರು ಹೇಳಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.