ADVERTISEMENT

Covid-19 World Update | 1.88 ಕೋಟಿ ಕೊರೊನಾ ಸೋಂಕಿತರು, 7.07 ಲಕ್ಷ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2020, 5:08 IST
Last Updated 6 ಆಗಸ್ಟ್ 2020, 5:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಪ್ರಕಾರ, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 1,88,10,392 ಗೆ ಏರಿದ್ದು, 7,07,666 ಮಂದಿ ಮೃತಪಟ್ಟಿದ್ದಾರೆ. 1,13,08,298 ಸೋಂಕಿತರು ಗುಣಮುಖರಾಗಿದ್ದಾರೆ.

ಎಂದಿನಂತೆ ಅಮೆರಿಕ 48,23,797 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. ಸದ್ಯ ಅಮೆರಿಕದಲ್ಲಿ 1,58,249 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 15,77,851 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 2,859,073 ಪ್ರಕರಣಗಳು ಪತ್ತೆಯಾಗಿವೆ.2,190,361 ಸೋಂಕಿತರು ಗುಣಮುಖರಾಗಿದ್ದು, 97,256 ಜನರು ಮೃತಪಟ್ಟಿದ್ದಾರೆ.

ADVERTISEMENT

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನಕ್ಕೇರಿರುವ ಭಾರತದಲ್ಲಿ 1,908,254 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 12,82,215 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 39,795 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ರಷ್ಯಾದಲ್ಲಿ 8,64,948, ದಕ್ಷಿಣ ಆಫ್ರಿಕಾದಲ್ಲಿ 5,29,877 , ಪೆರುವಿನಲ್ಲಿ 447,624, ಚಿಲಿಯಲ್ಲಿ 3,64,723 , ಇಂಗ್ಲೆಂಡ್‌ನಲ್ಲಿ 3,07,271, ಇರಾನ್‌ನಲ್ಲಿ 3,17,483 ಮತ್ತು ಸ್ಪೇನ್‌ನಲ್ಲಿ 3,05,767 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 46,295, ಇಟಲಿಯಲ್ಲಿ 35,181, ಮೆಕ್ಸಿಕೊದಲ್ಲಿ 49,698, ಪ್ರಾನ್ಸ್‌ನಲ್ಲಿ 30,297, ಸ್ಪೇನ್‌ನಲ್ಲಿ 28,499, ಪೆರುವಿನಲ್ಲಿ 20,228, ರಷ್ಯಾದಲ್ಲಿ 14,465, ಚಿಲಿಯಲ್ಲಿ 9,792, ದಕ್ಷಿಣ ಆಫ್ರಿಕಾದಲ್ಲಿ 9,298 ಮತ್ತು ಪಾಕಿಸ್ತಾನದಲ್ಲಿ 6,014 ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.