ವಾಷಿಂಗ್ಟನ್: ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 1,84,66,594 ಗೆ ಏರಿದ್ದು, 6,99,134 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ 1,10,58,317 ಸೋಂಕಿತರು ಗುಣಮುಖರಾಗಿದ್ದಾರೆ.
ಎಂದಿನಂತೆ ಅಮೆರಿಕ 47,68,083 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. ಸದ್ಯ ಅಮೆರಿಕದಲ್ಲಿ 1,56,771 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 15,28,979 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್ ಇದ್ದು, ಈ ದೇಶದಲ್ಲಿ 28,01,921 ಪ್ರಕರಣಗಳು ಪತ್ತೆಯಾಗಿವೆ.21,42,467 ಸೋಂಕಿತರು ಗುಣಮುಖರಾಗಿದ್ದು, 95,819 ಜನರು ಮೃತಪಟ್ಟಿದ್ದಾರೆ.
ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನಕ್ಕೇರಿರುವ ಭಾರತದಲ್ಲಿ 18,55,745 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 12,30,509 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 38,938 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ರಷ್ಯಾದಲ್ಲಿ 8,59,762, ದಕ್ಷಿಣ ಆಫ್ರಿಕಾದಲ್ಲಿ 5,21,318, ಪೆರುವಿನಲ್ಲಿ 4,33,100, ಚಿಲಿಯಲ್ಲಿ 3,62,962, ಇಂಗ್ಲೆಂಡ್‌ನಲ್ಲಿ 3,07,256, ಇರಾನ್‌ನಲ್ಲಿ 3,14,786 ಮತ್ತು ಸ್ಪೇನ್‌ನಲ್ಲಿ 3,02,814 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.
ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 46,295, ಇಟಲಿಯಲ್ಲಿ 35,171, ಮೆಕ್ಸಿಕೊದಲ್ಲಿ 48,869, ಪ್ರಾನ್ಸ್‌ನಲ್ಲಿ 30,297, ಸ್ಪೇನ್‌ನಲ್ಲಿ 28,498, ಪೆರುವಿನಲ್ಲಿ 19,811, ರಷ್ಯಾದಲ್ಲಿ 14,327, ಚಿಲಿಯಲ್ಲಿ 9,745, ದಕ್ಷಿಣ ಆಫ್ರಿಕಾದಲ್ಲಿ 8,884 ಮತ್ತು ಪಾಕಿಸ್ತಾನದಲ್ಲಿ 5,999 ಜನರು ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.