ADVERTISEMENT

Covid-19 World Update | 2.19 ಕೋಟಿ ಕೊರೊನಾ ಸೋಂಕಿತರು, 7.75 ಲಕ್ಷ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಆಗಸ್ಟ್ 2020, 16:50 IST
Last Updated 18 ಆಗಸ್ಟ್ 2020, 16:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಜಗತ್ತಿನಾದ್ಯಂತ ಸುಮಾರು 2.19 ಕೋಟಿ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 7.75ಲಕ್ಷ ಜನರು ಸಾವಿಗೀಡಾಗಿದ್ದಾರೆ.

ಯುಎಇನಲ್ಲಿ ಸೋಂಕು ಹೆಚ್ಚಳ
ಕಳೆದ ಎರಡು ವಾರಗಳಿಂದ ಯುಎಇನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಯುಎಇ ಆರೋಗ್ಯ ಸಚಿವರು ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇಲ್ಲಿ 365 ಹೊಸ ಪ್ರಕರಣಗಳು ವರದಿಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 64,906 ಮಂದಿಗೆ ಸೋಂಕು ತಗುಲಿದ್ದು 366 ಮಂದಿ ಮೃತಪಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿಯೇ ಲಸಿಕೆ ತಯಾರಿ: ಪ್ರಧಾನಿಸ್ಕಾಟ್ ಮಾರಿಸನ್

ADVERTISEMENT

ಬಹುನಿರೀಕ್ಷೆಯ ಕೊರೊನಾವೈರಸ್ ಲಸಿಕೆ ಪಡೆಯಲು ಅನುಮತಿ ಸಿಕ್ಕಿರುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಮಂಗಳವಾರ ಹೇಳಿದ್ದಾರೆ.ದೇಶದಲ್ಲೇ ಇದು ತಯಾರಾಗಲಿದ್ದು ಇಡೀ ಜನರಿಗೆ ಉಚಿತ ಔಷಧಿ ನೀಡಲಿದ್ದೇವೆ ಎಂದಿದ್ದಾರೆ ಸ್ಕಾಟ್ ಮಾರಿಸನ್.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ -19 ಲಸಿಕೆಯನ್ನು ಪಡೆಯಲು ಆಸ್ಟ್ರೇಲಿಯಾ ಸ್ವೀಡಿಷ್-ಬ್ರಿಟಿಷ್ ಔಷಧ ಕಂಪನಿ ಅಸ್ಟ್ರಾಜೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದೆ

ಈ ಲಸಿಕೆ ಯಶಸ್ವಿಯಾದರೆ ನಾವು ಇಲ್ಲಿಯೇ ಲಸಿಕೆಗಳನ್ನು ತಯಾರಿಸುತ್ತೇವೆ ಮತ್ತು ಪೂರೈಸುತ್ತೇವೆ. ಆಮೇಲೆ ಅದನ್ನು 25 ದಶಲಕ್ಷ ಆಸ್ಟ್ರೇಲಿಯನ್ನರಿಗೆ ಉಚಿತವಾಗಿ ನೀಡುತ್ತೇವೆ ಎಂದು ಮಾರಿಸನ್ ಹೇಳಿದ್ದಾರೆ.

3ನೇ ಹಂತದ ಪ್ರಯೋಗಗಳಲ್ಲಿರುವ ಜಗತ್ತಿನ 5 ಲಸಿಕೆಗಳ ಪೈಕಿ ಆಕ್ಸ್‌ಫರ್ಡ್ ಅಭಿವೃದ್ಧಿ ಪಡಿಸಿರುವ ಲಸಿಕೆಯೂ ಒಂದಾಗಿದೆ. ಈ ವರ್ಷಾಂತ್ಯದ ವೇಳೆಗೆ ಫಲಿತಾಂಶ ಲಭ್ಯವಾಗಬಹುದು ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ ಅಮೆರಿಕದ ಔಷಧ ತಯಾರಕ ಸಂಸ್ಥೆ ನೋವಾವಾಕ್ಸ್ ದಕ್ಷಿಣ ಆಪ್ರಿಕಾದಲ್ಲಿಕೊರೊನಾ ವೈರಸ್ ಲಸಿಕೆಯ ಮಧ್ಯಂತರ ಹಂತದ ಅಧ್ಯಯನವನ್ನು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.

ಮೊದಲ ಕೊರೊನಾ ವೈರಸ್ ಲಸಿಕೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೊಂಡ ರಷ್ಯಾದ ಲಸಿಕೆ ಬಳಕೆಗೆ ಲಭ್ಯವಾಗುವುದು ಇನ್ನೂ ಕೂಡ ಖಾತ್ರಿಯಾಗಿಲ್ಲ. ಲಸಿಕೆ ಸ್ಪುಟ್ನಿಕ್ ವಿ ಯ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶಗಳ ಬಗೆಗಿನ ಅನಿಶ್ಚಿತತೆಯ ಮಧ್ಯೆಯೇ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲಸಿಕೆಯನ್ನು ಪ್ರಯತ್ನಿಸಲು ಸ್ವಯಂಪ್ರೇರಿತರಾಗಿದ್ದಾರೆ.

ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಪ್ರಕಾರ, ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 2,19,40,380ಗೆ ಏರಿದ್ದು, 7,75,348 ಮಂದಿ ಮೃತಪಟ್ಟಿದ್ದಾರೆ.14,879,284 ಚೇತರಿಸಿಕೊಂಡಿದ್ದಾರೆ.

ವರ್ಲ್ಡೊಮೀಟರ್ ಅಂಕಿ ಅಂಶ ಪ್ರಕಾರ ಅಮೆರಿಕ 56,23,512ಸೋಂಕಿತರೊಂದಿಗೆ ಕೋವಿಡ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಸದ್ಯ ಅಮೆರಿಕದಲ್ಲಿ 17,4,141 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 2,975,698 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌‌ನಲ್ಲಿ 33,63,235 ಪ್ರಕರಣಗಳು ಪತ್ತೆಯಾಗಿವೆ.26,99,080 ಸೋಂಕಿತರು ಗುಣಮುಖರಾಗಿದ್ದು, 10,8,654 ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನಕ್ಕೇರಿರುವ ಭಾರತದಲ್ಲಿ 27,52,272 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 20,23,731 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 52,846 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ 9,25,558 , ದಕ್ಷಿಣ ಆಫ್ರಿಕಾದಲ್ಲಿ 5,89,886, ಪೆರುವಿನಲ್ಲಿ 5,35,946, ಚಿಲಿಯಲ್ಲಿ 3,87,502, ಇರಾನ್‌ನಲ್ಲಿ 3,45,450 , ಇಂಗ್ಲೆಂಡ್‌ನಲ್ಲಿ 3,21,060 ಮತ್ತು ಸ್ಪೇನ್‌ನಲ್ಲಿ 3,59,082 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 41,454, ಇಟಲಿಯಲ್ಲಿ 35,400, ಮೆಕ್ಸಿಕೊದಲ್ಲಿ 57,023, ಪ್ರಾನ್ಸ್‌ನಲ್ಲಿ 30,434, ಸ್ಪೇನ್‌ನಲ್ಲಿ 28,646, ಪೆರುವಿನಲ್ಲಿ 26,281, ರಷ್ಯಾದಲ್ಲಿ 15,707, ಚಿಲಿಯಲ್ಲಿ 10,513, ದಕ್ಷಿಣ ಆಫ್ರಿಕಾದಲ್ಲಿ 11,982 ಮತ್ತು ಪಾಕಿಸ್ತಾನದಲ್ಲಿ 6,175 ಜನರು ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.