ADVERTISEMENT

ಅಮೆರಿಕ ಜನರ ಸಾವಿಗೆ ಆರನೇ ಪ್ರಮುಖ ಕಾರಣ 'ಕೋವಿಡ್': ಸಿಡಿಸಿ

ಐಎಎನ್ಎಸ್
Published 25 ಫೆಬ್ರುವರಿ 2023, 7:06 IST
Last Updated 25 ಫೆಬ್ರುವರಿ 2023, 7:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಸ್ ಏಂಜಲೀಸ್: ಅಮೆರಿಕದಲ್ಲಿ ಜನವರಿ ತಿಂಗಳಲ್ಲಿ ವರದಿಯಾದ ಸಾವುಗಳಿಗೆ ಆರನೇ ಪ್ರಮುಖ ಕಾರಣ 'ಕೋವಿಡ್-19' ಎಂದು ಅಲ್ಲಿನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ) ವರದಿ ತಿಳಿಸಿದೆ.

ಕೋವಿಡ್-19 ನಿಯಂತ್ರಣದ ಸಲುವಾಗಿ ಜಾರಿಗೊಳಿಸಿರುವ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಮೇ 11ರಂದು ಕೊನೆಗೊಳಿಸುವುದಾಗಿ ಅಮೆರಿಕ ಸರ್ಕಾರ ಹೇಳಿದೆ.

ಅಮೆರಿಕದಲ್ಲಿ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿರುವ ಕೋವಿಡ್‌, ಜನರ ತೀವ್ರ ಅನಾರೋಗ್ಯ ಹಾಗೂ ಜೀವಿತಾವಧಿಯ ಕುಸಿತಕ್ಕೂ ಕಾರಣವಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಕೋವಿಡ್ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಆದ್ದರಿಂದ ಕೋವಿಡ್–19ರ ಲಸಿಕೆಗಳನ್ನು ನವೀಕರಿಸುವುದು ಮುಖ್ಯವಾಗಿದೆ. ತೀವ್ರವಾದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಕಡೆ ಹೆಚ್ಚು ಗಮನಹರಿಸುವ ಅಗತ್ಯವಾಗಿದೆ ಎಂದು ಸಿಡಿಸಿ ತಿಳಿಸಿದೆ.

ಸಿಡಿಸಿ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿದಿನ ಸರಾಸರಿ 33,000 ಹೊಸ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿ ದಿನ 3,500 ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಸುಮಾರು 344 ಜನ ಮೃತಪಡುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.