ADVERTISEMENT

Covid World Update: ಜಗತ್ತಿನಾದ್ಯಂತ 80.78 ಲಕ್ಷ ಸಕ್ರಿಯ ಪ್ರಕರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2020, 16:14 IST
Last Updated 9 ಅಕ್ಟೋಬರ್ 2020, 16:14 IST
   

ಲಂಡನ್‌: ಜಗತ್ತಿನಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 3.69 ಕೋಟಿ ಮೀರಿದೆ. ಈವರೆಗೂ ಸೋಂಕಿನಿಂದ 10,68,714 ಮಂದಿ ಮೃತಪಟ್ಟಿದ್ದಾರೆ.

ವಿಶ್ವದಲ್ಲಿ ಈ ವರೆಗೆ 2,77,57,190 ಮಂದಿ ಗುಣಮುಖರಾಗಿದ್ದಾರೆ ಹಾಗೂ 80,78,951 ಸಕ್ರಿಯ ಪ್ರಕರಣಗಳಿವೆ.

ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಅಲ್ಲಿ ಒಟ್ಟು 78,42,831 ಮಂದಿಗೆ ಸೋಂಕು ತಗುಲಿದ್ದರೆ, 2,17,857 ಮಂದಿ ಈ ವರೆಗೆ ಮೃತಪಟ್ಟಿರುವುದು ವರ್ಡೊಮೀಟರ್‌ನಿಂದ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

ADVERTISEMENT

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಎರಡನೇ ರಾಷ್ಟ್ರ ಭಾರತವಾಗಿದ್ದು, ಇಲ್ಲಿ, ಈ ವರೆಗೆ 69,46,598 ಮಂದಿಗೆ ಸೋಂಕು ತಗುಲಿದೆ. 1,06,925 ಮಂದಿ ಮೃತಪಟ್ಟಿದ್ದಾರೆ.

ಮೂರನೇ ಸ್ಥಾನದಲ್ಲಿ ಬ್ರೆಜಿಲ್‌ ಇದೆ. ಬ್ರೆಜಿಲ್‌ನಲ್ಲಿ ಒಟ್ಟು 50,29,539 ಕೋವಿಡ್‌ ಪ್ರಕರಣಗಳಿದ್ದು, ಅಲ್ಲಿ 1,49,034 ಮಂದಿ ಮೃತಪಟ್ಟಿದ್ದಾರೆ.

ಇನ್ನುಳಿದಂತೆ ರಷ್ಯಾದಲ್ಲಿ 12,72,238 ಪ್ರಕರಣಗಳು, 22,257 ಮಂದಿ ಸಾವು; ಕೊಲಂಬಿಯಾದಲ್ಲಿ 8,86,179 ಪ್ರಕರಣಗಳು ಹಾಗೂ 27,331 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ನೇಪಾಳದಲ್ಲಿ ಕಳೆದ 24 ಗಂಟೆಗಳಲ್ಲಿ 2,059 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,00,000 ದಾಟಿವೆ. ಈವರೆಗೂ 73,023 ಮಂದಿ ಸಾವಿಗೀಡಾಗಿದ್ದಾರೆ.

ಬ್ರಿಟನ್‌ನಲ್ಲಿ 24 ಗಂಟೆಗಳಲ್ಲಿ 17,540 ಪ್ರಕರಣಗಳು ವರದಿಯಾಗಿವೆ. ಇದರಿಂದ ಬ್ರಿಟನ್ ಸರ್ಕಾರ ಆತಂಕಕ್ಕೀಡಾಗಿದೆ.

ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್ಕಾಕ್ ನಾವು ಅಪಾಯಕಾರಿ ಸನ್ನಿವೇಶದಲ್ಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಸಚಿವ ಹ್ಯಾನ್ಕಾಕ್‌ ಅವರ ಆತಂಕಕ್ಕೂ ಕಾರಣವಿದೆ. ಗುರುವಾರ ಅಲ್ಲಿ ವರದಿಯಾಗಿದ್ದು 17,540 ಪ್ರಕರಣಗಳು. ಅದು ಹಿಂದಿನ ದಿನಕ್ಕಿಂತಲೂ ಮೂರು ಸಾವಿರ ಅಧಿಕ ಪ್ರಕರಣಗಳಾಗಿದ್ದವು. ಇದು ಹೀಗೆ ಮುಂದುವರಿದರೆ, ಭಾರಿ ದೊಡ್ಡ ಅಪಾಯ ಎದುರಿಸಬೇಕಾಗಬಹುದು ಎಂಬುದು ಸಚಿವರ ಆತಂಕವಾಗಿತ್ತು. ಇನ್ನು ಆಸ್ಪತ್ರೆಗಳಲ್ಲೂ ರೋಗಿಗಳ ಸಂಖ್ಯೆ ಏರುತ್ತಿದೆ. ಪಾಸಿಟಿವ್‌ ವರದಿ ಬಂದ 28 ದಿನಗಳ ಒಳಗಾಗಿ ಅಲ್ಲಿ 77 ಮಂದಿ ಮೃತಪಟ್ಟಿದ್ದಾರೆ.

ಬ್ರಿಟನ್‌ನಲ್ಲಿ ಈ ವರೆಗೆ 5,75,679 ಪ್ರಕರಣಗಳು ವರದಿಯಾಗಿವೆ. 42,682 ಮಂದಿ ಈ ವರೆಗೆ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೋವಿಡ್‌ ಟ್ರ್ಯಾಕರ್‌ ಮ್ಯಾಪ್‌ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.