ADVERTISEMENT

ಜಪಾನ್‌: ಕೋವಿಡ್‌ ರೋಗಿಗೆ ಶ್ವಾಸಕೋಶ ಅಂಗಾಂಶ ಕಸಿ

ಜಪಾನ್‌ ಕ್ಯೂಟೊ ವಿಶ್ವ ವಿದ್ಯಾಲಯ ಆಸ್ಪತ್ರೆ ವೈದ್ಯರ ಸಾಧನೆ

ಏಜೆನ್ಸೀಸ್
Published 9 ಏಪ್ರಿಲ್ 2021, 9:09 IST
Last Updated 9 ಏಪ್ರಿಲ್ 2021, 9:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟೊಕಿಯೊ: ಶ್ವಾಸಕೋಶ ತೀವ್ರವಾಗಿ ಹಾನಿಗೊಳಗಾಗಿದ್ದ ಕೋವಿಡ್‌ ರೋಗಿಗೆ ದಾನಿಯೊಬ್ಬರ ಶ್ವಾಸಕೋಶದ ಅಂಗಾಂಶವನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಕಸಿ ಮಾಡಿರುವುದಾಗಿ ಜಪಾನ್‌ನ ವೈದ್ಯರು ಹೇಳಿದ್ದಾರೆ.

ಕನ್ಸಾಯ್‌ನ ಪಶ್ಚಿಮ ಭಾಗದ ನಿವಾಸಿಯಾಗಿರುವ ಮಹಿಳೆಗೆ ಶ್ವಾಸಕೋಶದ ಅಂಗಾಂಶವನ್ನು ಕಸಿ ಮಾಡಲಾಗಿದೆ. ಆಕೆಯ ಪತಿ ಮತ್ತು ಮಗ ಶ್ವಾಸಕೋಶದ ಅಂಗಾಂಶವನ್ನು ದಾನ ಮಾಡಿದ್ದಾರೆ.

ಬುಧವಾರ ಸುಮಾರು 11 ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ. ಪತಿ ಮತ್ತು ಪುತ್ರ ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಕ್ಯೂಟೊ ವಿಶ್ವವಿದ್ಯಾಲಯ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ADVERTISEMENT

ದಾನಿಗಳಿಂದ ಶ್ವಾಸಕೋಶದ ಅಂಗಾಂಶ ಪಡೆದು, ಕೊರೊನಾ ಸೋಂಕಿತ ವ್ಯಕ್ತಿಗೆ ಯಶಸ್ವಿಯಾಗಿ ಕಸಿ ಮಾಡಿರುವ ವಿಶ್ವದ ಮೊದಲ ಪ್ರಯೋಗ ಇದು ಎಂದು ವಿಶ್ವವಿದ್ಯಾಲಯ ಹೇಳಿದೆ.

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗವನ್ನು ಕಸಿ ಮಾಡುವ ಶಸ್ತ್ರಚಿಕಿತ್ಸೆಗಳು ಜಪಾನ್‌ನಲ್ಲಿ ಅಪರೂಪ. ಇಂಥ ಸಂದರ್ಭದಲ್ಲಿ ಜೀವಂತ ವ್ಯಕ್ತಿಯಿಂದ ಅಂಗಾಂಶ ಪಡೆದು ಕಸಿ ಮಾಡುವುದು ರೋಗಿಗಳಿಗೆ ಒದಗಿರುವ ಉತ್ತಮ ಆಯ್ಕೆಯೇ ಸರಿ ಎಂದು ವಿ.ವಿ ಅಭಿ‍ಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.