ADVERTISEMENT

Covid-19 World Update| 6 ಕೋಟಿ ಸನಿಹಕ್ಕೆ ಸೋಂಕು ಪ್ರಕರಣಗಳು

ಏಜೆನ್ಸೀಸ್
Published 23 ನವೆಂಬರ್ 2020, 16:40 IST
Last Updated 23 ನವೆಂಬರ್ 2020, 16:40 IST
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ
ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ    
""

ಮೆಕ್ಸಿಕೊ: ಮೂರನೇ ಬಾರಿಗೆ ಮೆಕ್ಸಿಕೊದಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ 9,000 ದಾಟಿದೆ. ಭಾನುವಾರ 9,187 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 10,41,875ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 303 ಮಂದಿ ಸಾವಿಗೀಡಾಗಿದ್ದು, ಈವರೆಗೂ ಸೋಂಕಿನಿಂದ 1,01,676 ಮಂದಿ ಮೃತಪಟ್ಟಿದ್ದಾರೆ.

ಆಫ್ರಿಕಾ ಖಂಡದಲ್ಲಿ ಒಟ್ಟು ಕೋವಿಡ್‌–19 ಪ್ರಕರಣಗಳ ಸಂಖ್ಯೆ 20 ಲಕ್ಷ ದಾಟಿದ್ದು, ಆ ಪೈಕಿ 17,37,277 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ ಸೋಂಕಿನಿಂದ 49,412 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಜಗತ್ತಿನಾದ್ಯಂತ 5.92 ಕೋಟಿಗೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 13,97,282 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 4.97 ಕೋಟಿಗೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಗತ್ತಿನಾದ್ಯಂತ 1.68 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿರುವುದು ವರ್ಡೋಮೀಟರ್‌ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

ಅತಿ ಹೆಚ್ಚು ಪ್ರಕರಣಗಳ ಪೈಕಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ 1,25,98,889 ಪ್ರಕರಣಗಳು ದಾಖಲಾಗಿದ್ದು, 74,53,661 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ 2,62,757 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ ಭಾರತ (91 ಲಕ್ಷಕ್ಕೂ ಅಧಿಕ) ಎರಡನೇ ಸ್ಥಾನದಲ್ಲಿದ್ದರೆ, ಮೃತರ ಸಂಖ್ಯೆ ಆಧಾರದಲ್ಲಿ ಬ್ರೆಜಿಲ್‌ (1.69 ಲಕ್ಷ ಸಾವು) ಎರಡನೇ ಸ್ಥಾನದಲ್ಲಿದೆ.

ಬ್ರೆಜಿಲ್‌ನಲ್ಲಿ 4.69 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು, ಫ್ರಾನ್ಸ್‌ನಲ್ಲಿ 19.41 ಲಕ್ಷ, ಇಟಲಿಯಲ್ಲಿ 8.05 ಲಕ್ಷ, ಬೆಲ್ಜಿಯಂನಲ್ಲಿ 5.05 ಲಕ್ಷ ಹಾಗೂ ರಷ್ಯಾದಲ್ಲಿ 4.57 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.