ADVERTISEMENT

ಕೊರೊನಾ ಬಿಕ್ಕಟ್ಟು: 67 ಲಕ್ಷ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ

ತುರ್ತು ಕ್ರಮ ತೆಗೆದುಕೊಳ್ಳದಿದ್ದರೆ ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆ: ಯುನಿಸೆಫ್‌

ಪಿಟಿಐ
Published 28 ಜುಲೈ 2020, 12:06 IST
Last Updated 28 ಜುಲೈ 2020, 12:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ:ಕೋವಿಡ್‌–19ನಿಂದ ಉಂಟಾಗಿರುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮದಿಂದಾಗಿ ಪ್ರಪಂಚದಾದ್ಯಂತವಿರುವ ಐದು ವರ್ಷದೊಳಗಿನ 67 ಲಕ್ಷ ಮಕ್ಕಳು ಪೌಷ್ಟಿಕಾಂಶದ ತೀವ್ರ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಯುನಿಸೆಫ್ ಮಂಗಳವಾರ ತಿಳಿಸಿದೆ.

ಪೌಷ್ಟಿಕಾಂಶದ ಕೊರತೆ ನೀಗಿಸಲು ತುರ್ತು ಕ್ರಮ ತೆಗೆದುಕೊಳ್ಳಲಿದ್ದರೆ ಈ ವರ್ಷದ ಅಂತ್ಯಕ್ಕೆ ಈ ಸಂಖ್ಯೆ 5.4 ಕೋಟಿಗೆ ಏರಿಕೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.

ಮಕ್ಕಳಲ್ಲಿ ಪೌಷ್ಟಿಕಾಂಶದ ತೀವ್ರ ಕೊರತೆಯು ಈ ವರ್ಷದ ಬಹಳ ಅಪಾಯಕಾರಿ ಬೆಳವಣಿಗೆ ಎಂದೂ ಅದು ಹೇಳಿದೆ.

ADVERTISEMENT

2019ರಜಾಗತಿಕ ಹಸಿವು ಸೂಚ್ಯಂಕದ ಅನುಸಾರ, ಭಾರತದಲ್ಲಿ ಮಕ್ಕಳಲ್ಲಿ 2008–12ರಲ್ಲಿ 16.5ರಷ್ಟಿದ್ದಪೌಷ್ಟಿಕಾಂಶದ ಕೊರತೆ 2014–18ರಲ್ಲಿಶೇಕಡ 20.8 ಕ್ಕೆ ಏರಿಕೆಯಾಗಿದೆ.

ಪೌಷ್ಟಿಕಾಂಶದ ಕೊರತೆಯಿಂದ ಬಳಲುವ ಮಕ್ಕಳಲ್ಲಿಶೇ 80 ರಷ್ಟು ಮಕ್ಕಳು ಆಫ್ರಿಕಾದ ಸಹಾರಾ ಮರುಭೂಮಿ ದಕ್ಷಿಣ ಭಾಗದಲ್ಲಿರುವ ದೇಶಗಳು ಮತ್ತು ದಕ್ಷಿಣ ಏಷ್ಯಾಕ್ಕೆ ಸೇರಿದವರಾಗಿದ್ದಾರೆ.ಮಧ್ಯಮ ಆರ್ಥಿಕ ಆದಾಯದ ದೇಶಗಳ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಈ ವರ್ಷ ಶೇ 14.3 ಏರಿಕೆಯಾಗಬಹುದು ಎಂದು ಯುನಿಸೆಫ್‌ ತಿಳಿಸಿದೆ.

ಕೊರೊನಾ ಸಾಂಕ್ರಾಮಿಕ ಕಾಯಿಲೆ ಪ‍್ರಾರಂಭವಾಗಿ ಏಳು ತಿಂಗಳು ಕಳೆದಿದ್ದು, ಈ ಸಂದರ್ಭದಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಉಂಟಾಗಿದೆ ಎಂದುಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟಾ ಫೋರ್ ತಿಳಿಸಿದ್ಧಾರೆ.

ಕೊರೊನಾದಿಂದಾಗಿ ಬಡತನ ಮತ್ತುಆಹಾರ ಅಭದ್ರತೆಯ ಪ್ರಮಾಣ ಹೆಚ್ಚಾಗಿದೆ.ಅಗತ್ಯ ಪೌಷ್ಟಿಕಾಂಶ ಸೇವೆಗಳು ಮತ್ತು ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿವೆ. ಆಹಾರದ ಬೆಲೆಗಳು ಗಗನಕ್ಕೇರಿವೆ. ಪರಿಣಾಮವಾಗಿ, ಮಕ್ಕಳ ಆಹಾರದ ಗುಣಮಟ್ಟ ಕಡಿಮೆಯಾಗಿದೆ ಮತ್ತು ಅಪೌಷ್ಟಿಕತೆಯ ಪ್ರಮಾಣವು ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಂಕಿ ಅಂಶ

2 ಕೋಟಿ – ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಭಾರತದ ಮಕ್ಕಳು

4.70 – 2019ರಲ್ಲಿ ಪೌಷ್ಟಿಕಾಂಶದ ಕೊರತೆ ಎದುರಿಸಿದ ಮಕ್ಕಳು

ಅಪೌಷ್ಟಿಕತೆ ಪರಿಣಾಮ

ಅಪೌಷ್ಟಿಕತೆಯಿಂದಾಗಿ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಇದರಿಂದ ದೇಶದ ಅಭಿವೃದ್ಧಿಗೂ ಹಿನ್ನಡೆ ಉಂಟಾಗುತ್ತದೆ.

***

ಕೊರೊನಾದಿಂದಾಗಿ ಅಗತ್ಯ ಪೌಷ್ಟಿಕಾಂಶ ಸೇವೆಗಳು ಮತ್ತು ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿವೆ

– ಹೆನ್ರಿಯೆಟಾ ಫೋರ್,ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.