ADVERTISEMENT

Covid-19 World Update: ಅಮೆರಿಕದಲ್ಲಿ ಒಂದೇ ದಿನ 382 ಮಂದಿ ಸಾವು, ಇದೇ ಕಡಿಮೆ!

ಏಜೆನ್ಸೀಸ್
Published 15 ಜೂನ್ 2020, 2:02 IST
Last Updated 15 ಜೂನ್ 2020, 2:02 IST
ಸೋಂಕು ನಿವಾರಕ ಸಿಂಪಡಿಸುತ್ತಿರುವುದು– ಸಾಂದರ್ಭಿಕ ಚಿತ್ರ
ಸೋಂಕು ನಿವಾರಕ ಸಿಂಪಡಿಸುತ್ತಿರುವುದು– ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿ 24 ಗಂಟೆಗಳಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ 382 ಮಂದಿ ಸಾವಿಗೀಡಾಗಿದ್ದಾರೆ. ಏಪ್ರಿಲ್‌ ಮಧ್ಯದಿಂದ ದಾಖಲಾಗಿರುವ ಸಾವಿನ ಲೆಕ್ಕದಲ್ಲಿ ಅತಿ ಕಡಿಮೆ ಎಂದು ವರದಿಯಾಗಿದೆ.

ಜಗತ್ತಿನಲ್ಲೇ ಕೊರೊನಾ ವೈರಸ್‌ ಸೋಂಕಿನಿಂದ ಅತಿ ಹೆಚ್ಚು ನಷ್ಟ ಅನುಭವಿಸಿರುವ ಅಮೆರಿಕದಲ್ಲಿ ಈವರೆಗೆ 1,15,729 ಮಂದಿ ಸಾವಿಗೀಡಾಗಿದ್ದಾರೆ. ಇತ್ತೀಚಿನವರೆಗೂ ನಿತ್ಯ ಸುಮಾರು 800 ಜನರ ಸಾವು ದಾಖಲಾಗುತ್ತಿತ್ತು. ಒಟ್ಟು ಕೋವಿಡ್‌–19 ಪ್ರಕರಣಗಳ ಸಂಖ್ಯೆ 20,93,335.

ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಮಾಹಿತಿ ಪ್ರಕಾರ, ಜಗತ್ತಿನಾದ್ಯಂತ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 78,87,221 ಮುಟ್ಟಿದೆ ಹಾಗೂ ಸೋಂಕಿನಿಂದ 4,32,632 ಮಂದಿ ಸಾವಿಗೀಡಾಗಿದ್ದಾರೆ.

ADVERTISEMENT

ಕೊರೊನಾ ಹೊಸ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿರುವ ಬ್ರೆಜಿಲ್‌ನಲ್ಲಿ ಒಂದೇ ದಿನ 17,110 ಪ್ರಕರಣಗಳು ದಾಖಲಾಗಿದ್ದು, 612 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೆ ಸೋಂಕಿನಿಂದ 43,332 ಮಂದಿ ಮೃತಪಟ್ಟಿದ್ದಾರೆ. ಒಟ್ಟು 8,67,624 ಪ್ರಕರಣಗಳು ದಾಖಲಾಗಿವೆ.

ಚೀನಾದಲ್ಲಿ 53 ಹೊಸ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಸೋಂಕಿನಿಂದ ಬ್ರಿಟನ್‌ನಲ್ಲಿ 41,698 ಮಂದಿ, ಇಟಲಿಯಲ್ಲಿ 34,345 ಹಾಗೂ ಫ್ರಾನ್ಸ್‌ನಲ್ಲಿ 29,398 ಜನರು ಸಾವಿಗೀಡಾಗಿದ್ದಾರೆ.

ಮೆಕ್ಸಿಕೊದಲ್ಲಿ ಒಂದೇ ದಿನ 269 ಮಂದಿ ಮೃತಪಟ್ಟಿದ್ದು, 4,147 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು 1,46,837 ಪ್ರಕರಣಗಳು ಹಾಗೂ 17,141 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಒಟ್ಟು 3,20,922 ಪ್ರಕರಣಗಳು ದಾಖಲಾಗಿದ್ದು, 9,195 ಮಂದಿ ಸಾವಿಗೀಡಾಗಿದ್ದಾರೆ. ಭಾರತ ಒಟ್ಟು ಪ್ರಕರಣಗಳ ಪಟ್ಟಿಯಲ್ಲಿ ನಾಲ್ಕೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.