ADVERTISEMENT

ಅಫ್ಗಾನಿಸ್ತಾನದವರೆಗೆ ಚೀನಾ–ಪಾಕ್‌ ಆರ್ಥಿಕ ಕಾರಿಡಾರ್‌ ವಿಸ್ತರಣೆಗೆ ನಿರ್ಧಾರ

ಪಿಟಿಐ
Published 21 ಮೇ 2025, 14:15 IST
Last Updated 21 ಮೇ 2025, 14:15 IST
<div class="paragraphs"><p>China's Foreign Minister Wang Yi attends a press conference during the ongoing National People's Congress (NPC) in Beijing on March 7, 2025. (Photo by GREG BAKER / AFP)</p></div>

China's Foreign Minister Wang Yi attends a press conference during the ongoing National People's Congress (NPC) in Beijing on March 7, 2025. (Photo by GREG BAKER / AFP)

   

ಬೀಜಿಂಗ್‌/ ಇಸ್ಲಾಮಾಬಾದ್‌ (ಪಿಟಿಐ): ಚೀನಾ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ವಿದೇಶಾಂಗ ಸಚಿವರು ಬೀಜಿಂಗ್‌ನಲ್ಲಿ ಭೇಟಿಯಾಗಿ ಮೂರು ದೇಶಗಳ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರನ್ನು (ಸಿಪಿಇಸಿ) ಅಫ್ಗಾನಿಸ್ತಾನದವರೆಗೆ ವಿಸ್ತರಿಸಲು ನಿರ್ಧರಿಸಿದರು.

ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ, ಪಾಕಿಸ್ತಾನದ ಇಶಾಕ್‌ ಡಾರ್‌ ಮತ್ತು ಅಫ್ಗಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಾಕಿ ಅವರು ಭೇಟಿಯಾಗಿ ಮಾತುಕತೆ ನಡೆಸಿದರು ಎಂದು ಪಾಕಿಸ್ತಾನ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಸಾರ್ವಭೌಮತೆ, ಭದ್ರತೆ ಮತ್ತು ರಾಷ್ಟ್ರೀಯ ಘನತೆ ಕಾಪಾಡಲು ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಬೆಂಬಲ ನೀಡುವುದಾಗಿ ವಾಂಗ್‌ ಯಿ ತಿಳಿಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಾದುಹೋಗುವ ಕಾರಣ ಭಾರತ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪ್ರಾದೇಶಿಕ ಶಾಂತಿ ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ಪಾಕಿಸ್ತಾನ ಚೀನಾ ಮತ್ತು ಅಫ್ಗಾನಿಸ್ತಾನ ಒಟ್ಟಿಗೆ ಕೆಲಸ ಮಾಡಲಿವೆ
ಇಶಾಕ್ ಡಾರ್ ಪಾಕಿಸ್ತಾನದ ವಿದೇಶಾಂಗ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.