ADVERTISEMENT

ಸೈಬರ್ ದಾಳಿ: ಇರಾನ್‌ನ ಉಕ್ಕು ಉತ್ಪಾದನೆ ಕಂಪನಿ ಸ್ಥಗಿತ

ಏಜೆನ್ಸೀಸ್
Published 27 ಜೂನ್ 2022, 13:30 IST
Last Updated 27 ಜೂನ್ 2022, 13:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಸೈಬರ್ ದಾಳಿಯ ಪರಿಣಾಮದಿಂದ ಇರಾನ್‌ನ ಬೃಹತ್ ಉಕ್ಕಿನ ಕಂಪನಿಗಳಲ್ಲಿ ಒಂದಾದ ಸರ್ಕಾರಿ ಸ್ವಾಮ್ಯದ ಖುಝೆಸ್ತಾನ್ ಸ್ಟೀಲ್ ಕಂಪನಿಯ ಉತ್ಪಾದನೆ ಸ್ಥಗಿತಗೊಂಡಿದೆ.ಇತ್ತೀಚಿನ ದಿನಗಳಲ್ಲಿ ದೇಶದಕೈಗಾರಿಕೆ ವಲಯದ ಮೇಲೆನಡೆದ ಅತಿದೊಡ್ಡ ದಾಳಿ ಇದಾಗಿದೆ ಎನ್ನಲಾಗಿದೆ.

ಸೈಬರ್ ದಾಳಿಯ ಪರಿಣಾಮ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದ ಉಕ್ಕು ಉತ್ಪಾದನೆ ಅಸಾಧ್ಯವಾಗಿದೆ ಎಂದು ತಜ್ಞರು ಖಚಿತಪಡಿಸಿದ್ದಾರೆ. ಇದರಿಂದಾಗಿ ಮುಂದಿನ ಆದೇಶದವರೆಗೆ ಕಂಪನಿಯ ಕಾರ್ಯಚಟುವಟಿಕೆಗಳನ್ನು ಬಂದ್ ಮಾಡಲಾಗುತ್ತದೆ. ಅಲ್ಲದೆ, ಕಂಪನಿಯ ವೆಬ್‌ಸೈಟ್ ಸೇವೆಯಿಂದ ಹೊರಗಿರುವಂತೆ ಕಂಡುಬರುತ್ತಿದೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಉಕ್ಕು ಉತ್ಪಾದಿಸುವ ‘ಖುಜೆಸ್ತಾನ್ ಸ್ಟೀಲ್ ಕಂಪನಿ’ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.

ಮತ್ತೊಂದೆಡೆ, ವಿದ್ಯುತ್ ವ್ಯತ್ಯಯದಿಂದಾಗಿ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಸೈಬರ್ ದಾಳಿಯಿಂದ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ADVERTISEMENT

ಇಂತಹದ್ದೇ ಗುಂಪು ಸೈಬರ್ ದಾಳಿ ನಡೆಸಿದೆ ಎಂದು ಕಂಪನಿ ಈವರೆಗೆ ಆರೋಪಿಸಿಲ್ಲ. ದೇಶದ ಮೂಲಭೂತ ಸೌಕರ್ಯಗಳ ಮೇಲೆ ಈ ಹಿಂದೆ ನಡೆದ ದಾಳಿಯ ಹೊಣೆಯನ್ನು ಇರಾನ್ ಸರ್ಕಾರವು, ಅಮೆರಿಕ ಮತ್ತು ಇಸ್ರೇಲ್ ಮೇಲೆ ಹೊರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.