ADVERTISEMENT

ದಲೈಲಾಮಾಗೆ ‘ಗಾಂಧಿ ಮಂಡೇಲಾ‘ ಪ್ರಶಸ್ತಿ ಪ್ರದಾನ

ಪಿಟಿಐ
Published 19 ನವೆಂಬರ್ 2022, 12:50 IST
Last Updated 19 ನವೆಂಬರ್ 2022, 12:50 IST
ಧರ್ಮಶಾಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿಬೆಟ್ ಧರ್ಮಗುರು ದಲೈಲಾಮಾ ಅವರಿಗೆ ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ ‘ಗಾಂಧಿ ಮಂಡೇಲಾ’ ಪ್ರಶಸ್ತಿ ಪ್ರದಾನ ಮಾಡಿದರು.Dharamshala: Himachal Pradesh Governor Rajendra Vishwanath Arlekar confers Gandhi Mandela Award to Tibetan spiritual leader the Dalai Lama during the Gandhi Mandela Awards ceremony, organised by Gandhi Mandela Foundation, at Tsugla Khang temple, Mcleodganj, in Dharamshala, Saturday, Nov. 19. 2022. (PTI Photo)(PTI11_19_2022_000064A)

ಧರ್ಮಶಾಲಾ, ಹಿಮಾಚಲ ಪ್ರದೇಶ: ಟಿಬೆಟ್‌ನ ಧರ್ಮಗುರು ದಲೈಲಾಮಾ ಅವರಿಗೆ ಶನಿವಾರ ಇಲ್ಲಿ ನಡೆದ ಸಮಾರಂದಲ್ಲಿ ‘ಗಾಂಧಿ ಮಂಡೇಲಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಾಂಧಿ ಮಂಡೇಲಾ ಫೌಂಡೇಷನ್ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್ ಪ್ರಶಸ್ತಿ ಪ್ರದಾನ ಮಾಡಿದರು. ‘ವಿಶ್ವದಲ್ಲಿಯೇ ಈ ‍ಪ್ರಶಸ್ತಿಗೆ ದಲೈಲಾಮಾ ಸೂಕ್ತವಾದ ವ್ಯಕ್ತಿ’ ಎಂದು ಶ್ಲಾಘಿಸಿದರು.

ದಲೈಲಾಮಾ ಶಾಂತಿಯ ರಾಯಭಾರಿಯಾಗಿದ್ದಾರೆ. ಅಹಿಂಸೆ ಕುರಿತ ಅವರ ಸಿದ್ಧಾಂತ ಪ್ರಸ್ತುತ ಜಗತ್ತಿಗೆ ಅಗತ್ಯವಾಗಿದ್ದು, ಇದು ಸೇನೆಗಿಂತಲೂ ಹೆಚ್ಚು ಪರಿಣಾಮಕಾರಿಯಾದುದು ಎಂದು ರಾಜ್ಯಪಾಲರು ಹೇಳಿದರು.

ADVERTISEMENT

ದಲೈಲಾಮಾ ಅವರಿಗೆ ಗಡಿಯ ಮಿತಿ ಇಲ್ಲ. ಮಹಾತ್ಮಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಬಳಿಕ ವಿಶ್ವನಾಯಕರಾಗುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ದಲೈಲಾಮಾ ಅವರು, ಅಹಿಂಸೆ ಮತ್ತು ಸಹಾನುಭೂತಿ ಪ್ರಸ್ತುತ ವಿಶ್ವಶಾಂತಿಗೆ ಅಗತ್ಯವಾಗಿ ಬೇಕಾಗಿದೆ. ಶಾಂತಿ ಮತ್ತು ಚರ್ಚೆಯಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.