ADVERTISEMENT

ಕಾರಿನಲ್ಲಿ ಬಾಂಬ್‌ ಇಟ್ಟು ರಷ್ಯಾದ ವಿಚಾರವಾದಿ ಪುತ್ರಿಯ ಹತ್ಯೆ

ಏಜೆನ್ಸೀಸ್
Published 21 ಆಗಸ್ಟ್ 2022, 10:52 IST
Last Updated 21 ಆಗಸ್ಟ್ 2022, 10:52 IST
ಡೇರಿಯಾ ಡುಗಿನಾ ಅವರ ಕಾರು ಸ್ಫೋಟಗೊಂಡ ಸ್ಥಳದಲ್ಲಿ ತನಿಖಾ ತಂಡದವರು ಪರಿಶೀಲನೆ ನಡೆಸಿದರು –ಎಎಫ್‌ಪಿ ಚಿತ್ರ 
ಡೇರಿಯಾ ಡುಗಿನಾ ಅವರ ಕಾರು ಸ್ಫೋಟಗೊಂಡ ಸ್ಥಳದಲ್ಲಿ ತನಿಖಾ ತಂಡದವರು ಪರಿಶೀಲನೆ ನಡೆಸಿದರು –ಎಎಫ್‌ಪಿ ಚಿತ್ರ    

ಮಾಸ್ಕೊ (ಎ‍ಪಿ): ‘ರಷ್ಯಾ ರಾಷ್ಟ್ರೀಯತೆಯ ಪ್ರತಿಪಾದಕ ಅಲೆಕ್ಸಾಂಡರ್‌ ಡುಗಿನಾ ಅವರ ಮಗಳು ಡೇರಿಯಾ ಡುಗಿನಾ ಕಾರು ಬಾಂಬ್‌ ಸ್ಫೋಟದಲ್ಲಿ ಹತರಾಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.

‘ಡೇರಿಯಾ ಚಲಾಯಿಸುತ್ತಿದ್ದ ಎಸ್‌ಯುವಿ ಕಾರಿನಲ್ಲಿ ದುಷ್ಕರ್ಮಿಗಳು ಶನಿವಾರ ರಾತ್ರಿ ಬಾಂಬ್‌ ಅಳವಡಿಸಿ ಸ್ಫೋಟ ನಡೆಸಿದ್ದಾರೆ’ ಎಂದು ಮಾಸ್ಕೊ ಪ್ರದೇಶದ ತನಿಖಾ ತಂಡವು ಹೇಳಿದೆ.

‘29 ವರ್ಷದ ಡೇರಿಯಾ ಅವರು ತಂದೆಯೊಂದಿಗೆ ಸಾಂಸ್ಕೃತಿಕ ಉತ್ಸವವೊಂದರಲ್ಲಿ ಪಾಲ್ಗೊಂಡಿದ್ದರು. ಎಸ್‌ಯುವಿ ಕಾರಿನ ಮೂಲಕಅಲೆಕ್ಸಾಂಡರ್‌ ತಮ್ಮ ಮನೆಗೆ ಮರಳಬೇಕಿತ್ತು. ಕೊನೆ ಕ್ಷಣದಲ್ಲಿ ಅವರು ಮತ್ತೊಂದು ಕಾರಿನಲ್ಲಿ ಪ್ರಯಾಣ ಮಾಡಲು ನಿರ್ಧರಿಸಿದ್ದರು. ಹೀಗಾಗಿ ಡೇರಿಯಾ ಎಸ್‌ಯುವಿ ಕಾರಿನಲ್ಲಿ ಮನೆಗೆ ವಾಪಾಸಾಗುತ್ತಿದ್ದಾಗ ಘಟನೆ ನಡೆದಿದೆ’ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

‘ರಷ್ಯಾವು ಉಕ್ರೇನ್‌ ಮೇಲೆ ಯುದ್ಧ ಸಾರಿದ್ದನ್ನು ಅಲೆಕ್ಸಾಂಡರ್‌ ಬೆಂಬಲಿಸಿದ್ದರು. ಹೀಗಾಗಿ ಉಕ್ರೇನ್‌ನ ಉಗ್ರಗಾಮಿಗಳು ಅಲೆಕ್ಸಾಂಡರ್‌ ಹತ್ಯೆಗೆ ಮುಂದಾಗಿದ್ದರು’ ಎಂದು ರಷ್ಯಾ ಬೆಂಬಲಿತ ಡೊನೆಸ್ಕ್‌ ಪೀಪಲ್ಸ್‌ ರಿಪಬ್ಲಿಕ್‌ ಸಂಘಟನೆಯ ಅಧ್ಯಕ್ಷ ಡೆನಿಸ್‌ ಪುಶಿಲಿನ್‌ ದೂರಿದ್ದಾರೆ.

ಅಲೆಕ್ಸಾಂಡರ್ ಅವರುರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ಆಪ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.