ADVERTISEMENT

ದಾಳಿಕೋರರಲ್ಲಿ ಒಬ್ಬ ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕ: ಆಸ್ಟ್ರಿಯಾದ ಸಚಿವ

ರಾಯಿಟರ್ಸ್
Published 3 ನವೆಂಬರ್ 2020, 12:53 IST
Last Updated 3 ನವೆಂಬರ್ 2020, 12:53 IST
ವಿಯೆನ್ನಾದಲ್ಲಿ ಉಗ್ರರು ದಾಳಿ ನಡೆಸಿದ ನಂತರ, ಸೇನಾ ಯೋಧರು, ನಗರ ಕೆಲವು ಭಾಗದಲ್ಲಿ ರಸ್ತೆಗಳನ್ನು ಬಂದ್‌ ಮಾಡಿದರು.
ವಿಯೆನ್ನಾದಲ್ಲಿ ಉಗ್ರರು ದಾಳಿ ನಡೆಸಿದ ನಂತರ, ಸೇನಾ ಯೋಧರು, ನಗರ ಕೆಲವು ಭಾಗದಲ್ಲಿ ರಸ್ತೆಗಳನ್ನು ಬಂದ್‌ ಮಾಡಿದರು.   

ವಿಯೆನ್ನಾ: ಮಧ್ಯ ವಿಯೆನ್ನದಾದ್ಯಂತ ನಡೆದ ಸರಣಿ ಭಯೋತ್ಪಾದಕ ದಾಳಿಗಳನ್ನು ನಡೆಸಿರುವ ತಂಡದಲ್ಲಿ, ಒಬ್ಬ ‘ಇಸ್ಲಾಮಿಕ್‌ ಸ್ಟೇಟ್‌ ಗುಂಪಿಗೆ ಸೇರಿದ ಭಯೋತ್ಪಾದಕ‘ನಿದ್ದಾನೆ ಎಂದು ಆಸ್ಟ್ರಿಯಾದ ಆಂತರಿಕ ಸಚಿವ ಕಾರ್ಲ್‌ ನೆಹಮ್ಮರ್‌ ಮಂಗಳವಾರ ಹೇಳಿದ್ದಾರೆ.

ವರ್ಚುವಲ್‌ ಸುದ್ದಿಗೋಷ್ಠಿ ಮೂಲಕ ಮಾತನಾಡಿದ ಅವರು, ‘ಪೊಲೀಸರಿಂದ ಹತ್ಯೆಯಾದ ಈ ಭಯೋತ್ಪಾದಕ, ಭಾರಿ ಪ್ರಮಾಣದ ಶಸ್ತ್ರಸಜ್ಜಿತ ಮತ್ತು ಸ್ಫೋಟಕಗಳನ್ನೊಳಗೊಂಡ ಬೆಲ್ಟ್‌ ಧರಿಸಿದ್ದ. ಈತ ಇಸ್ಲಾಮಿಕ್ಸ್ಟೇಟ್‌ ಬಗ್ಗೆ ಸಹಾನುಭೂತಿ ಹೊಂದಿದವನಾಗಿದ್ದ‘ ಎಂದು ಮಾಹಿತಿ ನೀಡಿದರು. ಇದೇ ವೇಳೆ ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು ಎಂದು ಮನವಿ ಮಾಡಿದರು.

ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದ್ದು, ದಾಳಿ ನಡೆಸಿದ ಉಗ್ರರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.