ADVERTISEMENT

ಹವಾಯಿ ಕಾಳ್ಗಿಚ್ಚು: ಮೃತರ ಸಂಖ್ಯೆ 101ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 4:16 IST
Last Updated 16 ಆಗಸ್ಟ್ 2023, 4:16 IST
ಲಾಯಿನಾದಲ್ಲಿ ಕಾಳ್ಗಿಚ್ಚು ಅವಘಡ
ಲಾಯಿನಾದಲ್ಲಿ ಕಾಳ್ಗಿಚ್ಚು ಅವಘಡ   

ಲಾಯಿನಾ (ಅಮೆರಿಕ): ಅಮೆರಿಕದ ಹವಾಯಿ ದ್ವೀಪದ ಮಾಯುನಲ್ಲಿ ಸಂಭವಿಸಿದ ಭೀಕರ ಕಾಳ್ಗಿಚ್ಚು ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.

ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಕಾರ್ಯ ಜಾರಿಯಲ್ಲಿದೆ. ಅಮೆರಿಕ ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆಯ ವಿಧಿ ವಿಜ್ಞಾನ ತಜ್ಞರು ಮತ್ತು ಶ್ವಾನದಳದ ನೆರವಿನಿಂದ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಮೃತರ ಗುರುತು ಪತ್ತೆ ಹಚ್ಚುವುದು ಅತ್ಯಂತ ಸವಾಲಿನಿಂದ ಕೂಡಿದ ಕೆಲಸವಾಗಿದೆ ಎಂದು ಹವಾಯಿ ಗವರ್ನರ್ ಜೋಶ್ ಗ್ರೀನ್ ಹೇಳಿದ್ದಾರೆ.

ADVERTISEMENT

ವಾರಂತ್ಯದಲ್ಲಿ ಮತ್ತೆ ಚಂಡಮಾರುತ ಬೀಸುವ ಸಾಧ್ಯತೆಯಿದೆ ಎಂದು ಗ್ರೀನ್ ಎಚ್ಚರಿಸಿದ್ದಾರೆ.

ಕಳೆದ 100 ವರ್ಷಗಳಲ್ಲೇ ಅಮೆರಿಕದಲ್ಲಿ ಸಂಭವಿಸಿದ ಅತಿ ಭೀಕರ ಕಾಳ್ಗಿಚ್ಚು ದುರಂತವಾಗಿದೆ. 13,000ಕ್ಕೂ ಹೆಚ್ಚು ಕಟ್ಟಡಗಳು ಹಾನಿಯಾಗಿವೆ. ಸಾವಿರಾರು ಮಂದಿ ನಿರಾಶ್ರಿತ ಶಿಬಿರಗಳಲ್ಲಿ ಅಶ್ರಯ ಪಡೆದಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಪತ್ನಿ ಜಿಲ್ ಬೈಡನ್ ಆದಷ್ಟು ಬೇಗ ಹವಾಯಿಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.