ADVERTISEMENT

ಗ್ಯಾಸ್‌ ಟ್ಯಾಂಕ್ ಸ್ಫೋಟ: ಮೃತರ ಸಂಖ್ಯೆ 15ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 21:43 IST
Last Updated 18 ನವೆಂಬರ್ 2022, 21:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಗ್ದಾದ್: ಉತ್ತರ ಇರಾಕ್‌ ನ ವಸತಿ ಸಮುಚ್ಚಯದಲ್ಲಿ ಗುರುವಾರ ರಾತ್ರಿ ಅನಿಲ ತುಂಬಿದ ಟ್ಯಾಂಕ್‌ ಸ್ಫೋಟಗೊಂಡ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ ಆಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸುಲಿಮಾನಿಯಾ ನಗರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂರು ಮನೆ ನೆಲಸಮಗೊಂಡಿದ್ದು, 16 ಜನರು ಗಾಯಗೊಂಡಿದ್ದಾರೆ.

ನೂರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಕುರ್ದಿಶ್ ಅಧಿಕಾರಿಗಳು ಮತ್ತು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ADVERTISEMENT

ಬದುಕುಳಿದವರ ಪತ್ತೆಗಾಗಿ ನಾಗರಿಕ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.ಒಟ್ಟು 15 ಶವಗಳನ್ನು ಅವಶೇಷಗಳಿಂದ ಹೊರ ತೆಗೆಯಲಾಗಿದೆ ಎಂದು ಸುಲಿಮಾನಿಯಾದ ಸಿವಿಲ್ ಡಿಫೆನ್ಸ್ ಮುಖ್ಯಸ್ಥ ದಿಯಾರ್ ಇಬ್ರಾಹಿಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.