ADVERTISEMENT

ಇರಾನ್‌: ಕಟ್ಟಡ ಕುಸಿತ:ಮೃತರ ಸಂಖ್ಯೆ 41ಕ್ಕೆ ಏರಿಕೆ

ಪಿಟಿಐ
Published 6 ಜೂನ್ 2022, 12:36 IST
Last Updated 6 ಜೂನ್ 2022, 12:36 IST
ಅಬಾದಾನ್ ನಗರದಲ್ಲಿ ಮೇ 23ರಂದು 10 ಮಹಡಿಗಳ ಬೃಹತ್ ಕಟ್ಟಡ ಉರುಳಿಬಿದ್ದಿರುವ ಈ ಚಿತ್ರವನ್ನು ಮೇ 27ರಂದು ಇರಾನ್ ಸರ್ಕಾರ ಬಿಡುಗಡೆ ಮಾಡಿತ್ತು 
ಅಬಾದಾನ್ ನಗರದಲ್ಲಿ ಮೇ 23ರಂದು 10 ಮಹಡಿಗಳ ಬೃಹತ್ ಕಟ್ಟಡ ಉರುಳಿಬಿದ್ದಿರುವ ಈ ಚಿತ್ರವನ್ನು ಮೇ 27ರಂದು ಇರಾನ್ ಸರ್ಕಾರ ಬಿಡುಗಡೆ ಮಾಡಿತ್ತು    

ದುಬೈ(ಪಿಟಿಐ): ಇರಾನ್‌ನ ನೈಋತ್ಯ ಭಾಗದಲ್ಲಿ ಇತ್ತೀಚೆಗೆಬೃಹತ್ ಕಟ್ಟಡ ಕುಸಿದು ಸಂಭವಿಸಿದ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿದೆ ಎಂದು ಅಬಾದಾನ್ ನಗರದ ಗವರ್ನರ್ ಎಹಸುನ್ ಅಬ್ಬಸ್‌ಪೂರ್ ತಿಳಿಸಿದ್ದಾರೆ.

ರಾಜಧಾನಿ ಟೆಹರಾನ್‌ನಿಂದ ಸುಮಾರು 660 ಕಿ.ಮೀ ದೂರದಲ್ಲಿದ್ದ ಮೆಟ್ರೊಪೋಲ್ ಕಟ್ಟಡ ಇದೇ ಮೇ 23ರಂದು ಕುಸಿದಿತ್ತು. ಆಕ್ರೋಶಗೊಂಡ ಜನರು ಬಳಿಕ ಅಬಾದಾನ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಗುಂಪು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT