ಬೀಜಿಂಗ್:ಕೊರೊನಾ ವೈರಸ್ ಸೋಂಕಿಗೆ ಚೀನಾದ ವುಹಾನ್ ನಗರದಲ್ಲಿಮಂಗಳವಾರ ಮತ್ತೆ 25 ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. 840 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಚೀನಾದಾದ್ಯಂತ ಈವರೆಗೆ 5,300ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ಮಧ್ಯೆ, ವುಹಾನ್ನಲ್ಲಿರುವ ತಮ್ಮ ದೇಶದವರನ್ನು ಜಪಾನ್ ಮತ್ತು ಅಮೆರಿಕ ವಾಪಸ್ ಕರೆಸಿಕೊಂಡಿವೆ. ಜಪಾನ್ನ 200 ಮಂದಿ ಹಾಗೂ ಅಮೆರಿಕದ240 ಜನ ಬುಧವಾರ ಬೆಳಿಗ್ಗೆ ಸ್ವದೇಶಕ್ಕೆ ವಾಪಸಾಗಿದ್ದಾರೆ.
ವುಹಾನ್ನಲ್ಲಿ ಬಂದ್ ವಾತಾವರಣ:ಮಾರಕ ಸೋಂಕಿನಿಂದಾಗಿ ವುಹಾನ್ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.ದೊಡ್ಡ ಉದ್ಯಮಗಳು ಕೆಲಸ ಸ್ಥಗಿತಗೊಳಿಸಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಸೂಚಿಸಿದೆ. ಹೊಸ ವರ್ಷದ ರಜೆ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.
ಇದನ್ನೂ ಓದಿ:ಕೊರೊನಾ ವೈರಸ್: 106 ಕ್ಕೇರಿದ ಸಾವಿನ ಸಂಖ್ಯೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.