ADVERTISEMENT

ಬಾಂಗ್ಲಾ ದೋಣಿ ದುರಂತ: ಮೃತರ ಸಂಖ್ಯೆ 39ಕ್ಕೆ ಏರಿಕೆ

ಪಿಟಿಐ
Published 26 ಸೆಪ್ಟೆಂಬರ್ 2022, 11:15 IST
Last Updated 26 ಸೆಪ್ಟೆಂಬರ್ 2022, 11:15 IST
ದೋಣಿ ದುರಂತ ಸಂಭವಿಸಿದ ನದಿಯ ದಂಡೆಯಲ್ಲಿ ಆತಂಕದಿಂದ ಸೇಇದ್ದ ಜನರು  –ಎಎಫ್‌ಪಿ ಚಿತ್ರ
ದೋಣಿ ದುರಂತ ಸಂಭವಿಸಿದ ನದಿಯ ದಂಡೆಯಲ್ಲಿ ಆತಂಕದಿಂದ ಸೇಇದ್ದ ಜನರು  –ಎಎಫ್‌ಪಿ ಚಿತ್ರ   

ಢಾಕಾ: ಬಾಂಗ್ಲಾದೇಶದ ವಾಯವ್ಯ ಭಾಗದ ಪಂಚಗಡ ಜಿಲ್ಲೆಯ ಕೊರೊಟೊ ನದಿಯಲ್ಲಿ ಭಾನುವಾರ ದೋಣಿಯೊಂದು ಮಗುಚಿದ್ದು, ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

ಮೃತರಲ್ಲಿ 21 ಮಹಿಳೆಯರು, 11 ಮಕ್ಕಳು ಮತ್ತು ಏಳು ಮಂದಿ ಪುರುಷರು ಸೇರಿದ್ದಾರೆ. ಇನ್ನೂ 58 ಮಂದಿ ನಾಪತ್ತೆಯಾಗಿದ್ದಾರೆ.ಬೋದೇಶ್ವರಿ ದೇವಸ್ಥಾನಕ್ಕೆ ದುರ್ಗಾ ಪೂಜೆಗಾಗಿದೋಣಿಯಲ್ಲಿ ಸುಮಾರು 80 ಮಂದಿ ಪ್ರಯಾಣಿಸುತ್ತಿದ್ದರು ಎಂದು ಸಂಬಂಧಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನದಿಯಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಕೆಲವರು ನೀರಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.