ADVERTISEMENT

Delhi Blasts | ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ: ಅಮೆರಿಕ

ಪಿಟಿಐ
Published 11 ನವೆಂಬರ್ 2025, 2:24 IST
Last Updated 11 ನವೆಂಬರ್ 2025, 2:24 IST
<div class="paragraphs"><p>ಸ್ಫೋಟ ಸಂಭವಿಸಿದ ಬಳಿಕದ ನೋಟ</p></div>

ಸ್ಫೋಟ ಸಂಭವಿಸಿದ ಬಳಿಕದ ನೋಟ

   

– ಪಿಟಿಐ

ನ್ಯೂಯಾರ್ಕ್: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಭೀಕರ ಸ್ಪೋಟಕ್ಕೆ ಸಂತಾಪ ವ್ಯಕ್ತಪಡಿಸಿರುವ ಅಮೆರಿಕ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಹೇಳಿದೆ.

ADVERTISEMENT

‘ನವದೆಹಲಿಯಲ್ಲಿ ನಡೆದ ಭಯಾನಕ ಸ್ಫೋಟದಿಂದ ಬಾಧಿತರಾದವರ ಜೊತೆ ನಾವಿದ್ದೇವೆ. ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಸಂತಾಪಗಳು. ಗಾಯಗೊಂಡವರ ಶೀಘ್ರ ಚೇತರಿಕೆಗೆ ನಾವು ಪ್ರಾರ್ಥಿಸುತ್ತೇವೆ’ ಎಂದು ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಬ್ಯೂರೋ ‘ಎಕ್ಸ್‌’ ಪೋಸ್ಟ್‌ನಲ್ಲಿ ತಿಳಿಸಿದೆ.

ಅಮೆರಿಕ ವಿದೇಶಾಂಗ ಇಲಾಖೆಯ ರಾಯಭಾರ ವ್ಯವಹಾರಗಳ ವಿಭಾಗವು ’ಭದ್ರತಾ ಎಚ್ಚರಿಕೆ’ಯನ್ನು ಬಿಡುಗಡೆ ಮಾಡಿದ್ದು, ‘ಸದ್ಯಕ್ಕೆ ಸ್ಫೋಟಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ. ಭಾರತ ಸರ್ಕಾರವು ಹಲವು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ದೆಹಲಿಯ ಕೆಂಪು ಕೋಟೆ ಹಾಗೂ ಚಾಂದಿನಿ ಚೌಕ್ ಪ್ರದೇಶದಲ್ಲಿ ಓಡಾಡುವುದನ್ನು ತಪ್ಪಿಸಿ. ಜನ ಗುಂಪು ಸೇರುವಲ್ಲಿ ಹೋಗಬೇಡಿ. ಸ್ಥಳೀಯ ಮಾಧ್ಯಮಗಳಲ್ಲಿ ಮಾಹಿತಿ ತಿಳಿದುಕೊಳ್ಳಿ. ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಎಚ್ಚರದಿಂದಿರಿ. ಪ್ರವಾಸಿಗರು ಹೆಚ್ಚು ಬರುವ ಸ್ಥಳಗಳಿಗೆ ಹೋಗಬೇಡಿ’ ಎಂದು ಹೇಳಿದೆ.

ಇದಕ್ಕೂ ಮುನ್ನ ಪಿಟಿಐಗೆ ಜೊತೆ ಮಾತನಾಡಿದ್ದ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ, ‘ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಬಗ್ಗೆ ಮಾಹಿತಿ ಇದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ರಾಯಭಾರ ನೆರವುಗಳನ್ನು ನೀಡಲು ಸಿದ್ಧರಿದ್ದೇವೆ’ ಎಂದು ಹೇಳಿದ್ದರು.

ಸೋಮವಾರ ಸಂಜೆ ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಸಮೀಪದ ಸಂಚಾರ ಸಿಗ್ನಲ್‌ನ ಬಳಿ ನಿಧಾನವಾಗಿ ಚಲಿಸುತ್ತಿದ್ದ ಕಾರು ಸ್ಫೋಟಗೊಂಡು 9 ಮಂದಿ ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.