ADVERTISEMENT

5 ವರ್ಷಗಳ ಬಳಿಕ ಉತ್ತರ ಕೊರಿಯಾದಿಂದ ಮತ್ತೆ ಖಂಡಾಂತರ ಕ್ಷಿಪಣಿ ಪರೀಕ್ಷೆ

ದಕ್ಷಿಣ ಕೊರಿಯಾ ಸೇರಿ ಇತರ ದೇಶಗಳ ಕಳವಳ

ಏಜೆನ್ಸೀಸ್
Published 24 ಮಾರ್ಚ್ 2022, 13:26 IST
Last Updated 24 ಮಾರ್ಚ್ 2022, 13:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೋಲ್‌ : ಉತ್ತರ ಕೊರಿಯಾವು ಗುರುವಾರ ಶಂಕಿತ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಿಸಿದ್ದು, 2017ರಿಂದೀಚೆಗೆ ನಡೆದಿರುವ ಪ್ರಥಮ ಪರೀಕ್ಷೆ ಇದಾಗಿದೆ ಎಂದು ನೆರೆಯ ದೇಶಗಳು ಆತಂಕ ವ್ಯಕ್ತಪಡಿಸಿವೆ.

ಈ ಹಿನ್ನೆಲೆಯಲ್ಲಿ ಉತ್ತರ ಕೊರಿಯಾವನ್ನು ಅಣ್ವಸ್ತ್ರ ದೇಶ ಎಂದು ಒಪ್ಪಿಕೊಳ್ಳಬೇಕು. ಜೊತೆಗೆ ಆ ದೇಶದ ಮೇಲಿನ ಈಗಿನ ಸಡಿಲ ನಿರ್ಬಂಧಗಳನ್ನು ತೆಗೆದು ಹಾಕಿ ಕಠಿಣ ನಿರ್ಬಂಧ ವಿಧಿಸಬೇಕು ಎಂದು ದಕ್ಷಿಣ ಕೊರಿಯಾ ಸಹಿತ ಇತರ ನೆರೆಹೊರೆಯ ರಾಷ್ಟ್ರಗಳು ಅಮೆರಿಕದ ಮೇಲೆ ಒತ್ತಡ ಹೇರತೊಡಗಿವೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಸೇನೆಗಳು ಖಂಡಾಂತರ ಕ್ಷಿಪಣಿ ವಿರುದ್ಧದ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಎರಡೂ ದೇಶಗಳು ಘೋಷಿಸಿಕೊಂಡ ಬೆನ್ನಲ್ಲೇ ಉತ್ತರ ಕೊರಿಯಾದಿಂದ ಈ ಕ್ಷಿಪಣಿ ಪರೀಕ್ಷೆ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.