
ಪಿಟಿಐ
ದಶಕದ ಬಳಿಕ ಕರಾಚಿಯಿಂದ ಢಾಕಾಕ್ಕೆ ನೇರ ವಿಮಾನ ಹಾರಾಟ
ಕರಾಚಿ: ದಶಕದ ಬಳಿಕ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ನೇರ ವಿಮಾನ ಹಾರಾಟ ಮರು ಆರಂಭವಾಗಿದ್ದು, ಇದರ ನಿಮಿತ್ತ ಗುರುವಾರ ರಾತ್ರಿ ಕರಾಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಸಮಾರಂಭ ನಡೆಯಿತು.
ಬಾಂಗ್ಲಾದೇಶ ಸರ್ಕಾರದ ಒಡೆತನದ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನ ಜಿ–341 ಢಾಕಾದಿಂದ ಹೊರಟು ರಾತ್ರಿ 11 ಗಂಟೆಗೆ ಕರಾಚಿಯಲ್ಲಿನ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು ಎಂದು ವಿಮಾನಯಾನ ಮೂಲಗಳು ತಿಳಿಸಿವೆ.
2012ರ ಬಳಿಕ ಢಾಕಾ ಮತ್ತು ಕರಾಚಿಯ ನಡುವಿನ ಮೊದಲ ನೇರ ವಿಮಾನ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.