ADVERTISEMENT

ಭಾರತ ಭೇಟಿ ರದ್ದು: ಶುಭ್‌ನೀತ್‌ ಸಿಂಗ್‌ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2023, 5:15 IST
Last Updated 22 ಸೆಪ್ಟೆಂಬರ್ 2023, 5:15 IST
<div class="paragraphs"><p>ಶುಭ್‌ನೀತ್‌ ಸಿಂಗ್‌</p></div>

ಶುಭ್‌ನೀತ್‌ ಸಿಂಗ್‌

   

ಬೆಂಗಳೂರು: ಪಂಜಾಬ್‌ ಮೂಲದ ಕೆನಡಾ ಗಾಯಕ ಶುಭ್‌ನೀತ್‌ ಸಿಂಗ್‌ ಖಾಲಿಸ್ತಾನಿ ಹೋರಾಟಗಾರರ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಅವರ ಭಾರತ ಭೇಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪ್ರವಾಸ ರದ್ದಾಗಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ADVERTISEMENT

ಶುಭ್‌ ಅವರು ಭಾರತದ ಭೂಪಟ ಹಂಚಿಕೊಂಡು, ಪಂಜಾಬ್‌ಗಾಗಿ ಪಾರ್ಥಿಸಿ ಎಂದು ಬರೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ಪೋಸ್ಟ್‌ ಅನ್ನು ಅಳಿಸಿ ಹಾಕಿ, ಕೇವಲ ಪಂಜಾಬ್‌ಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದರು.

ಪಂಜಾಬ್‌ನಲ್ಲಿ ವಿದ್ಯುತ್‌, ಇಂಟರ್‌ನೆರ್ಟ್‌ ಸೇವೆ ಸ್ಥಗಿತಗೊಂಡಿರುವುದಾಗಿ ವರದಿಗಳು ಬಂದಿದ್ದವು. ಹೀಗಾಗಿ ಪಂಜಾಬ್‌ಗಾಗಿ ಪ್ರಾರ್ಥಿಸಿ ಎಂದು ಬರೆದಿರುವುದಾಗಿ ಹೇಳಿದ್ದಾರೆ. ನಾನು, ಖಂಡಿತವಾಗಿಯೂ ಯಾರ ಭಾವನೆಗಳನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಶುಭ್‌ ಹೇಳಿದ್ದಾರೆ.

ಖಾಲಿಸ್ತಾನದ ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆಯೆಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪಿಸಿದ್ದರು. ಬಳಿಕ ಕೆನಡಾದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಭಾರತ ಉಚ್ಚಾಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.