ADVERTISEMENT

ಸುಂದರ ವದನ, ಮೆಷಿನ್‌ ಗನ್‌ನಂತಹ ತುಟಿ: ಟ್ರಂಪ್ ಹೊಗಳಿದ ಈ ಚೆಲುವೆ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 13:13 IST
Last Updated 10 ಡಿಸೆಂಬರ್ 2025, 13:13 IST
   

ವಾಷಿಂಗ್ಟನ್: ನೇರ ಮಾತುಗಾರಿಕೆ ಮೂಲಕ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ತಮ್ಮ ಮಾಧ್ಯಮ ಕಾರ್ಯದರ್ಶಿಯ ಸೌಂದರ್ಯವನ್ನು ಬಣ್ಣಿಸುವ ಮೂಲಕ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರ 'ಸುಂದರ ಮುಖ' ಮತ್ತು 'ತುಟಿಗಳ' ಬಗ್ಗೆ ತಮ್ಮ ಆರ್ಥಿಕ ಕಾರ್ಯಸೂಚಿಯನ್ನು ಪ್ರಚಾರ ಮಾಡುವ ಉದ್ದೇಶದಿಂದ ಮಾಡಿದ ಭಾಷಣದಲ್ಲಿ ಹೊಗಳಿದರು. 79 ವರ್ಷದ ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ನಡೆದ ರ್‍ಯಾಲಿಯಲ್ಲಿ ತಮ್ಮ ಆಡಳಿತದ ಆರ್ಥಿಕ ಯಶಸ್ಸಿನ ಕುರಿತು ಭಾಷಣ ಮಾಡುತ್ತಿದ್ದಾಗ, 28 ವರ್ಷದ ಪತ್ರಿಕಾ ಕಾರ್ಯದರ್ಶಿ ಎಷ್ಟು ಶ್ರೇಷ್ಠ ಎಂದು ಹಾಡಿ ಹೊಗಳಿದ್ದಾರೆ.

‘ನಾವು ಇಂದು ನಮ್ಮ ಸೂಪರ್ ಸ್ಟಾರ್ ಅನ್ನೂ ಕರೆತಂದಿದ್ದೇವೆ. ಅವರು ನಮ್ಮ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್. ಅವರು ಗ್ರೇಟ್ ಅಲ್ಲವೇ’ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದ್ದಾರೆ.

ADVERTISEMENT

ಬಳಿಕ, ಕ್ಯಾರೊಲಿನ್‌ ಅವರ ಆತ್ಮವಿಶ್ವಾಸ ಮತ್ತು ಲುಕ್ ಅನ್ನು ಹೊಗಳಿದ ಟ್ರಂಪ್, ಅವಳು ಫಾಕ್ಸ್ ಟಿ.ವಿಗೆ ಚರ್ಚೆಗೆ ಹೋದಾಗ ಆ ಕಾರ್ಯಕ್ರಮದಲ್ಲಿ ಆಧಿಪತ್ಯ ಸಾಧಿಸುತ್ತಾರೆ. ಸುಂದರವಾದ ಮುಖ ಮತ್ತು ಮೆಷಿನ್ ಗನ್‌ನಂತಹ ತುಟಿಗಳಿಂದ ಎಲ್ಲರನ್ನು ನಿಬ್ಬೆರಗಾಗಿಸುತ್ತಾರೆ’ಎಂದು ಟ್ರಂಪ್ ಹೊಗಳಿದ್ದಾರೆ.

‘ನಾವು ನಮ್ಮ ಸರ್ಕಾರದಲ್ಲಿ ಸರಿಯಾದ ನೀತಿಗಳನ್ನು ಹೊಂದಿದ್ದೇವೆ. ಹಾಗಾಗಿ, ಅವರಿಗೆ ಯಾವುದೇ ಭಯವಿಲ್ಲ’ ಎಂದಿದ್ದಾರೆ. ಈ ಹಿಂದಿನ ಸಂದರ್ಶನವೊಂದರಲ್ಲೂ ಟ್ರಂಪ್, ಆಕೆಯನ್ನು ಹೊಗಳಿದ್ದರು.

ಕ್ಯಾರೊಲಿನ್‌ಗಿಂತ ಉತ್ತಮ ಪತ್ರಿಕಾ ಕಾರ್ಯದರ್ಶಿಯನ್ನು ನಾವು ಈ ಹಿಂದೆ ಎಂದು ಹೊಂದಿರಲಿಲ್ಲ ಎಂದಿದ್ದಾರೆ.

ಟ್ರಂಪ್‌ಗೆ 5ನೇ ಪತ್ರಿಕಾ ಕಾರ್ಯದರ್ಶಿಯಾಗಿ ನೇಮಕವಾಗಿರುವ ಕ್ಯಾರೊಲಿನ್, ಆ ಹುದ್ದೆ ಅಲಂಕರಿಸಿದ ಅತ್ಯಂತ ಕಿರಿಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.