ADVERTISEMENT

ಡೊನಾಲ್ಡ್‌ ಟ್ರಂಪ್ ಶಾಂತಿ ಬಯಸುವ ವ್ಯಕ್ತಿ : ಜೋಸೆಫ್ ಕೇತ್‌ ಕೆಲ್ಲೋಗ್‌

ಪಿಟಿಐ
Published 27 ಆಗಸ್ಟ್ 2020, 6:38 IST
Last Updated 27 ಆಗಸ್ಟ್ 2020, 6:38 IST
ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ನಡೆಯುತ್ತಿರುವ ಸ್ಥಳ (ಸಂಗ್ರಹ ಚಿತ್ರ)
ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ನಡೆಯುತ್ತಿರುವ ಸ್ಥಳ (ಸಂಗ್ರಹ ಚಿತ್ರ)   

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಂದೂ ಅಪಾಯ ಮಾಡುವಂತಹ ವ್ಯಕ್ತಿಯಲ್ಲ. ಅವರು ಶಾಶ್ವತವಾದ ಸಂಘರ್ಷದ ಬದಲು ಶಾಂತಿ ನೆಲೆಸಬೇಕೆಂದು ಬಯಸುವ ವ್ಯಕ್ತಿಯಾಗಿದ್ದಾರೆ. ಅಂಥ ವ್ಯಕ್ತಿಯನ್ನು ಈ ಬಾರಿಯ ಚುನಾವಣೆಯಲ್ಲಿ ಪುನಃ ಆಯ್ಕೆ ಮಾಡುವಂತೆ ಅಮೆರಿಕದ ಉಪಾಧ್ಯಕ್ಷರ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿವೃತ್ತ ಲೆಫ್ಟಿನೆಂಟ್ ಜನರಲ್ ಜೋಸೆಫ್ ಕೇತ್‌ ಕೆಲ್ಲೋಗ್‌ ಜೂನಿಯರ್ ಅಮೆರಿಕದ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಇಲ್ಲಿ ನಡೆಯುತ್ತಿರುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ’ಅಮೆರಿಕದ ವಿರುದ್ಧ ಚೀನಾ ನಡೆಸುತ್ತಿರುವ ಪ್ರಚೋದನಕಾರಿ ಚಟುವಟಿಕೆಗಳನ್ನು ಹತ್ತಿಕ್ಕುತ್ತೇವೆಂದು ಟ್ರಂಪ್ ಸವಾಲು ಹಾಕಿದ್ದಾರೆ. ಆದರೆ, ಅಮೆರಿಕದ ಆಡಳಿತದ ವಿಷಯದಲ್ಲಿ ಯಾವುದೇ ತಪ್ಪು ಮಾಡಿಲ್ಲ, ಅಪಾಯಕಾರಿಯಾಗಿಯೂ ವರ್ತಿಸುತ್ತಿಲ್ಲ’ ಎಂದು ಕೆಲ್ಲೋಗ್‌ ಟ್ರಂಪ್ ಆಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ.

'ಬಹಳ ವರ್ಷಗಳಿಂದ ತಾಲಿಬಾನ್ ಮತ್ತು ಅಫ್ಗಾನ್ ಸರ್ಕಾರದೊಂದಿಗೆ ನಡೆಯುತ್ತಿದ್ದ ದೀರ್ಘ ಕಾಲದ ಯುದ್ಧಕ್ಕೆ ತೆರೆ ಎಳೆಯಲು, ಟ್ರಂಪ್ ಶಾಂತಿ ಮಾತುಕತೆಗೆ ಮುಂದಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.