ADVERTISEMENT

ಪ್ರತಿಸುಂಕ ರದ್ದುಪಡಿಸಿದ ನ್ಯಾಯಮೂರ್ತಿಗಳ ವಿರುದ್ಧ ಟ್ರಂಪ್ ತೀವ್ರ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2026, 2:44 IST
Last Updated 21 ಫೆಬ್ರುವರಿ 2026, 2:44 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್‌: ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿ ತೀರ್ಪು ನೀಡಿದ ಅಮೆರಿಕ ಸುಪ್ರೀಂ ಕೋರ್ಟ್‌ನ ಆರು ನ್ಯಾಯಮೂರ್ತಿಗಳ ವಿರುದ್ಧ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ‘ಅವರು(ನ್ಯಾಯಮೂರ್ತಿಗಳು) ಮೂರ್ಖರಾಗಿದ್ದು, ಎಡಪಂಥೀಯ ಡೆಮಾಕ್ರೆಟಿಕ್‌ಗಳ ಕೈಗೊಂಬೆಗಳಾಗಿದ್ದಾರೆ. ಅವರಿಗೆ ದೇಶಭಕ್ತಿ ಇಲ್ಲ ಹಾಗೂ ನಮ್ಮ ಸಂವಿಧಾನದ ಬಗ್ಗೆ ನಿಷ್ಠೆಯೂ ಇಲ್ಲದವರಾಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.

‘ಅವರ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ನಮ್ಮ ದೇಶಕ್ಕೆ ಸರಿಯಾದದ್ದನ್ನು ಮಾಡುವ ಧೈರ್ಯ ಅವರಿಗಿಲ್ಲ’ ಎಂದೂ ಹೇಳಿದ್ದಾರೆ.

ADVERTISEMENT

'ಇತರ ದೇಶಗಳ ಮೇಲೆ ಸುಂಕ ವಿಧಿಸುವುದನ್ನು ಮುಂದುವರಿಸಲು ಇತರ ವಿಧಾನಗಳನ್ನು ಕಂಡುಕೊಳ್ಳುವುದಾಗಿ’ ತಿಳಿಸಿದ್ದಾರೆ.

ಇದೇ ವೇಳೆ ಪ್ರತಿಸುಂಕವನ್ನು ಸಮರ್ಥಿಸಿಕೊಂಡಿದ್ದ ನ್ಯಾಯಮೂರ್ತಿಗಳಾದ ಸ್ಯಾಮ್ಯುಯೆಲ್ ಅಲಿಟೊ, ಕ್ಲಾರೆನ್ಸ್ ಥಾಮಸ್ ಮತ್ತು ಬ್ರೆಟ್ ಕ್ಯಾವನಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಹೆಚ್ಚುವರಿ ಸುಂಕದ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕದ ಸುಪ್ರೀಂ ಕೋರ್ಟ್‌ 6:3 ಬಹುಮತದ ತೀರ್ಪು ನೀಡಿದೆ ಹಾಗೂ ಹೆಚ್ಚುವರಿ ಪ್ರತಿಸುಂಕವನ್ನು ರದ್ದುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.