ADVERTISEMENT

ಇರಾನ್‌ನಲ್ಲಿ ಆಡಳಿತ ಬದಲಾವಣೆ: ಡೊನಾಲ್ಡ್‌ ಟ್ರಂಪ್‌ ಒತ್ತಡ

ಏಜೆನ್ಸೀಸ್
Published 14 ಫೆಬ್ರುವರಿ 2026, 13:22 IST
Last Updated 14 ಫೆಬ್ರುವರಿ 2026, 13:22 IST
ಟ್ರಂಪ್‌
ಟ್ರಂಪ್‌   

ವಾಷಿಂಗ್ಟನ್‌: ‘ಇರಾನ್‌ನಲ್ಲಿ ಆಡಳಿತ ಬದಲಾವಣೆ ಒಳ್ಳೆಯದು’ ಎಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಮೇಲೆ ಮಿಲಿಟರಿ ಒತ್ತಡವನ್ನು ಹೆಚ್ಚಿಸಲು ಪಶ್ಚಿಮ ಏಷ್ಯಾಕ್ಕೆ ಎರಡನೆಯ ವಿಮಾನವಾಹಕ ನೌಕೆಯನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ. 

ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿಯ ಹಿಡಿತದಿಂದ ಅಧಿಕಾರ ಬದಲಿಸುವುದು ಮತ್ತು ಟೆಹರಾನ್‌ನ ಪರಮಾಣು ಕಾರ್ಯಕ್ರಮಗಳನ್ನು ಮಿತಿಗೊಳಿಸಲು ಒಪ್ಪಂದ ಮಾಡಿಕೊಳ್ಳುವಂತೆ ಟ್ರಂಪ್‌, ಇರಾನ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. 

1979ರ ಇಸ್ಲಾಮಿಕ್‌ ಕ್ರಾಂತಿಯ ನಂತರ ಗಡಿಪಾರು ಮಾಡಲಾದ ಇರಾನ್‌ನ ಪಹ್ಲವಿ ರಾಜಮನೆತನದ ಕೊನೆಯ ದೊರೆ ಷಾ ಅವರ ಪುತ್ರ, ರೇಜಾ ಪಹ್ಲವಿ ಅವರು, ಟೆಹರಾನ್‌ ವಿಷಯದಲ್ಲಿ ಅಂತರರಾಷ್ಟ್ರೀಯ ಹಸ್ತಕ್ಷೇಪಕ್ಕಾಗಿ ಮನವಿ ಮಾಡಿದ್ದಾರೆ. ರೇಜಾ ಪಹ್ಲವಿ ಸದ್ಯ ಅಮೆರಿಕದಲ್ಲಿದ್ದಾರೆ. ರೇಜಾ ಮನವಿಯ ಬೆನ್ನಲ್ಲೇ, ಟ್ರಂಪ್‌ ಹೇಳಿಕೆ ಹೊರಬಿದ್ದಿದೆ. 

ADVERTISEMENT

ಫೋರ್ಟ್‌ ಬ್ರಾಗ್‌ ಸೇನಾ ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ‘ಆಡಳಿತ ಬದಲಾವಣೆಯು ಇರಾನ್‌ನಲ್ಲಿ ಸಂಭವಿಸಬಹುದಾದ ಅತ್ಯುತ್ತಮ ವಿಷಯ’ ಎಂದಿದ್ದಾರೆ.

‘ಬೇರೆ ಜನರಿದ್ದಾರೆ’
‘ಖಮೇನಿ ಬದಲು ಇರಾನ್‌ನಲ್ಲಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ’ ಎನ್ನುವುದಕ್ಕೆ ಉತ್ತರಿಸಲು ನಿರಾಕರಿಸಿರುವ ಟ್ರಂಪ್‌ ‘ಅದಕ್ಕೆ ಬೇರೆ ಜನರಿದ್ದಾರೆ’ ಎಂದಷ್ಟೇ  ಹೇಳಿದ್ದಾರೆ.   ‘ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಯುದ್ಧನೌಕೆಯು ಶೀಘ್ರದಲ್ಲೇ ಪಶ್ಚಿಮ ಏಷ್ಯಾದತ್ತ ಹೊರಡಲಿದೆ. ಇರಾನ್‌ ಒಪ್ಪಂದಕ್ಕೆ ಒಪ್ಪದಿದ್ದರೆ ನಮಗೆ ಈ ನೌಕೆ ಬೇಕಾಗುತ್ತದೆ’ ಎಂದು ಟ್ರಂಪ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.