ADVERTISEMENT

ದುಬೈನಲ್ಲಿ ಬಸ್ ಅಪಘಾತ: ಸಾವಿಗೀಡಾದ 17 ಮಂದಿಯಲ್ಲಿ 8 ಭಾರತೀಯರು

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 6:57 IST
Last Updated 7 ಜೂನ್ 2019, 6:57 IST
   

ದುಬೈ: ಸಂಯುಕ್ತ ಅರಬ್ ರಾಷ್ಟ್ರದಲ್ಲಿ ರಸ್ತೆ ಸೂಚನಫಲಕಕ್ಕೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಎಂಟು ಮಂದಿ ಭಾರತೀಯರು ಎಂದು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿದೆ.

ಒಮಾನ್‌ನಿಂದ ದುಬೈಗೆ ಬರುತ್ತಿದ್ದ ಬಸ್ ಗುರುವಾರ ಸಂಜೆ ಅಪಘಾತಕ್ಕೀಡಾಗಿತ್ತು.

ದುಬೈ ಬಸ್ ಅಪಘಾತದಲ್ಲಿ 8 ಭಾರತೀಯರು ಸಾವಿಗೀಡಾಗಿದ್ದಾರೆ. ಸಾವಿಗೀಡಾದವರ ಕುಟುಂಬದವರನ್ನು ರಾಯಭಾರಿ ಕಚೇರಿ ಸಂಪರ್ಕಿಸಿದ್ದು, ಇನ್ನು ಕೆಲವು ಕುಟುಂಬದವರಿಗೆ ತಿಳಿಸಲು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ADVERTISEMENT

ಅಪಘಾತದಲ್ಲಿ ಸಾವಿಗೀಡಾದವರು -ರಾಜಗೋಪಾಲನ್, ಫಿರೋಜ್ ಖಾನ್ ಪಠಾಣ್, ರೇಷ್ಮಾ ಫಿರೋಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟ್ಟಿಲ್, ಕಿರಣ್ ಜಾನಿ, ವಾಸುದೇವ್ ಮತ್ತು ತಿಲಕ್‌ರಾಮ್ ಜವಾಹರ್ ಠಾಕೂರ್ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಗಾಯಗೊಂಡ ನಾಲ್ಕು ಮಂದಿ ಭಾರತೀಯರಿಗೆ ಪ್ರಥಮ ಚಿಕಿತ್ಸೆ ನೀಡಿ ಕಳಿಸಿಕೊಟ್ಟಿದ್ದು ಮೂವರು ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಯಭಾರಿ ಕಚೇರಿ ಮೊದಲುಟ್ವೀಟ್ ಮಾಡಿತ್ತು.

ವರದಿಗಳ ಪ್ರಕಾರ, ಒಮಾನ್ ಸರ್ಕಾರದ ಬಸ್ ಮಸಲತ್ ಗುರುವಾರ ಸಂಜೆ 6 ಗಂಟೆಗೆ ಶೇಖ್ ಮೊಹಮ್ಮದ್ ಬಿನ್ ಜಾಯದ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.