ADVERTISEMENT

ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ; 3,500 ನಿವಾಸಿಗಳ ತೆರವು

ಪಿಟಿಐ
Published 14 ಜೂನ್ 2025, 14:24 IST
Last Updated 14 ಜೂನ್ 2025, 14:24 IST
<div class="paragraphs"><p>ದುಬೈನ ಪಿನಾಕಲ್ ಟವರ್‌ನಲ್ಲಿ ಕಾಣಿಸಿಕೊಂಡ ಬೆಂಕಿ</p></div>

ದುಬೈನ ಪಿನಾಕಲ್ ಟವರ್‌ನಲ್ಲಿ ಕಾಣಿಸಿಕೊಂಡ ಬೆಂಕಿ

   

ದುಬೈ: ದುಬೈನಲ್ಲಿರುವ 764 ಮನೆಗಳಿರುವ 67 ಅಂತಸ್ತಿನ ಮರಿನಾ ಪಿನಾಕಲ್‌ (ಟೈಗರ್‌ ಟವರ್‌) ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಶುಕ್ರವಾರ ತಡ ರಾತ್ರಿ ಈ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಕಟ್ಟಡದಲ್ಲಿದ್ದ 3,820 ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ದುಬೈನ ಮಾಧ್ಯಮ ಕಚೇರಿ ಶನಿವಾರ ಮಾಹಿತಿ ನೀಡಿದೆ. 

ADVERTISEMENT

ದುಬೈನ ನಾಗರಿಕ ಸೇನಾ ತಂಡವು ಆರು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ

ಕಟ್ಟಡದ ನಿವಾಸಿಗಳಿಗೆ ತಾತ್ಕಾಲಿಕ ವಸತಿ ಸೌಕರ್ಯ ಕಲ್ಪಿಸುವ, ಅವರ ಸುರಕ್ಷತೆ ಮತ್ತು ಆರೈಕೆ ಕಲ್ಪಿಸುವ ನಿಟ್ಟಿನಲ್ಲಿ ಕಟ್ಟಡದ ಡೆವಲಪರ್‌ ಜತೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. 

ಅಗ್ನಿ ಅವಘಡ ಕುರಿತು ಶನಿವಾರ ನಸುಕಿನ 1.44ಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಡಿಎಂಒ ಮಾಹಿತಿ ಹಂಚಿಕೊಂಡಿದ್ದಾರೆ. 67 ಅಂತಸ್ತಿನ ಕಟ್ಟಡದಲ್ಲಿದ್ದ ಜನರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ. ಅವರ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೈಕೆಯ ಕಾಳಜಿಗೆ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ. ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ತಂಡ ತನ್ನ ಪ್ರಯತ್ನ ಮುಂದುವರಿಸಿದೆ’ ಎಂದು ತಿಳಿಸಿದ್ದರು.

ಆಂಬುಲೆನ್ಸ್‌ ಸಹಿತ ವೈದ್ಯಕೀಯ ತಂಡ ಭೇಟಿ ನೀಡಿದೆ ಎಂದು ನಸುಕಿನ 2.09ಕ್ಕೆ ಸಂದೇಶ ಕಳುಹಿಸಿದ್ದಾರೆ. ಬಹುಮಹಡಿ ಕಟ್ಟಡದಲ್ಲಿದ್ದ 764 ಮನೆಗಳ 3,820 ನಿವಾಸಿಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ ಎಂದು 2.21ಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.

ಟೈಗರ್ ಟವರ್ ಎಂದೇ ಕರೆಯಲಾಗುವ ಮರಿನಾ ಪಿನಾಕಲ್‌ನಲ್ಲಿ ಇಂಥ ಅಗ್ನಿ ಅವಘಡ ಸಂಭವಿಸಿದ್ದು ಇದೇ ಮೊದಲಲ್ಲ. 2015ರಲ್ಲೂ 47ನೇ ಅಂತಸ್ತಿನ ಅಡುಗೆ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡು ಅದು 48ನೇ ಅಂತಸ್ತಿಗೂ ವ್ಯಾಪಿಸಿತ್ತು ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.