ADVERTISEMENT

ದುಬೈನಲ್ಲಿ ‘ಜನಗಣಮನ’ | ದೀಪಾವಳಿ ಮೆರುಗು ಹೆಚ್ಚಿಸಿದ ದುಬೈ ಪೊಲೀಸ್ ಬ್ಯಾಂಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2019, 2:50 IST
Last Updated 26 ಅಕ್ಟೋಬರ್ 2019, 2:50 IST
ದುಬೈನಲ್ಲಿ ದೀಪಾವಳಿ ಸಂಭ್ರಮ (ಚಿತ್ರಕೃಪೆ: twitter.com/cgidubai)
ದುಬೈನಲ್ಲಿ ದೀಪಾವಳಿ ಸಂಭ್ರಮ (ಚಿತ್ರಕೃಪೆ: twitter.com/cgidubai)   

ದುಬೈ ಪ್ರವಾಸೋದ್ಯಮ ಇಲಾಖೆ ಮತ್ತು ಭಾರತೀಯ ದೂತಾವಾಸ ಕಚೇರಿಗಳು ಜಂಟಿಯಾಗಿ ಆಯೋಜಿಸಿದ್ದದೀಪಾವಳಿ ಕಾರ್ಯಕ್ರಮದಲ್ಲಿ ಅಲ್ಲಿನ ಪೊಲೀಸ್ ಬ್ಯಾಂಡ್ರಾಷ್ಟ್ರಗೀತೆ ನುಡಿಸಿ ಭಾರತೀಯರ ಪ್ರೀತಿಗೆ ಪಾತ್ರವಾಯಿತು. ರಾಷ್ಟ್ರಗೀತೆ ನುಡಿಸಿರುವ ವಿಡಿಯೊ ಇದೀಗವೈರಲ್ ಆಗಿದೆ.

ದೀಪಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ಅಪಾರ ಜನಸಂದಣಿ ಉತ್ಸಾಹದಿಂದ ಪಾಲ್ಗೊಂಡಿತ್ತು. ಲೇಸರ್‌ ಷೋ,ಪಟಾಕಿ, ಬಾಣ, ಬಿರುಸುಗಳು ಬಾನಿನಲ್ಲಿ ಚಿತ್ತಾರ ಬರೆದವು.

ಆಕರ್ಷಕ ಲೇಸರ್‌ ಷೋ ಆರಂಭವಾಗುವ ಮೊದಲು ಪೊಲೀಸ್ ಬ್ಯಾಂಡ್ ನೆರೆದಿದ್ದ ಜನಸಮುದಾಯದ ಎದುರು ‘ಜನಗಣಮನ’ ನುಡಿಸಿತು. ಸ್ಥಳದಲ್ಲಿದ್ದ ಸಾವಿರಾರು ಅನಿವಾಸಿ ಭಾರತೀಯರು, ಪ್ರವಾಸಕ್ಕೆ ಬಂದಿದ್ದ ಭಾರತೀಯರು, ಅವರ ಗೆಳೆಯರು,ಈ ಸಂದರ್ಭ ತಾವೂ ರಾಷ್ಟ್ರಗೀತೆ ಹಾಡಿ ಭಾವುಕರಾದರು. ದೇಶಕ್ಕೆ ಜಯಕಾರ ಮೊಳಗಿಸಿ ಸಂಭ್ರಮಿಸಿದರು.

ADVERTISEMENT

‘ವಿದೇಶದಲ್ಲಿ ನಮ್ಮ ದೇಶದ ಬಾವುಟ ನೋಡಿದಾಗ, ರಾಷ್ಟ್ರಗೀತೆ ಕೇಳಿದಾಗ ಸಿಗುವಖುಷಿಯೇ ಬೇರೆ’ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನದಿಂದ ಬರೆದುಕೊಂಡರು. ಭಾರತಕ್ಕೆ ಗೌರವ ತೋರಿಸಿದದುಬೈ ಪೊಲೀಸರನ್ನು ಅಭಿನಂದಿಸಿದರು. ಈ ವಿಡಿಯೊಗೆ ಕಾಮೆಂಟ್ ಮಾಡಿರುವ ಹಲವರು, ಎರಡೂ ದೇಶಗಳ ಬಾವುಟಗಳ ಚಿತ್ರದೊಂದಿಗೆ ‘ಆತ್ಮೀಯ ಸ್ನೇಹಿತರು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

ಝಗಮಗಿಸುವ ವೇದಿಕೆಯಲ್ಲಿ ನಡೆದ ವಿಶೇಷ ನೃತ್ಯ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.