ADVERTISEMENT

ಕದ್ದಾಲಿಕೆ ಆರೋಪಕ್ಕೆ ಚೀನಾ ತಿರುಗೇಟು: ಐಫೋನ್ ಬದಲು ಹುವೈ ಬಳಸಲು ಟ್ರಂಪ್‌ಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 12:52 IST
Last Updated 26 ಅಕ್ಟೋಬರ್ 2018, 12:52 IST
   

ಬೀಜಿಂಗ್‌: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಐಫೋನ್‌ ಮೂಲಕ ಸ್ನೇಹಿತರೊಂದಿಗೆ ನಡೆಸಿದ ಮಾತುಕತೆಯನ್ನುಚೀನಾ ಹಾಗೂ ರಷ್ಯಾ ಗುಪ್ತಚರ ಸಿಬ್ಬಂದಿ ಕದ್ದಾಲಿಕೆ ಮಾಡಿದ್ದಾರೆ’ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ಪ್ರಕಟಿಸಿದ್ದ ವರದಿಗೆ ಪ್ರತಿಕ್ರಿಯಿಸಿರುವ ಚೀನಾ, ಐಫೋನ್‌ ಬದಲು ಹುವೈ ಮೊಬೈಲ್‌ ಬಳಸುವಂತೆ ಟ್ರಂಪ್‌ ಅವರಿಗೆ ಸಲಹೆ ನೀಡಿದೆ.

ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್‌, ..ಟೈಮ್ಸ್‌ ವರದಿಯು ಸುಳ್ಳು. ಸಂಪೂರ್ಣ ಭದ್ರತೆ ಸಲುವಾಗಿ ಸಂವಹನಕ್ಕಾಗಿ ಅವಲಂಭಿಸಿರುವ ಆಧುನಿಕ ಸಾಧನಗಳನ್ನು ಬಳಸುಕೆಯನ್ನು ನಿಲ್ಲಸಿ ಎಂದು ಹೇಳಿದರು.

‘ಮೊದಲನೆಯದಾಗಿ, ನ್ಯೂಯಾರ್ಕ್‌ ಟೈಮ್ಸ್‌ ಇಂತಹ ಪೂರ್ವಯೋಜಿತ ಸುಳ್ಳು ಸುದ್ದಿಗಳನ್ನು ಪ್ರಕಟಿಸುವಾಗ ಸಾಕ್ಷಿಗಳನ್ನೂ ಸೇರಿಸಲಿ. ಎರಡನೆಯದಾಗಿ ಅವರ ಐಫೋನ್‌ನಿಂದ ಮಾತುಕತೆ ಕದ್ದಾಲಿಕೆಯಾಗುತ್ತಿದೆ ಎಂಬ ಚಿಂತೆ ಕಾಡುತ್ತಿದ್ದರೆ, ಅವರು ಐಫೋನ್‌ ಬದಲು ಹುವೈ ಮೊಬೈಲ್‌ಗಳನ್ನು ಬಳಸಲು ಪ್ರಾರಂಭಿಸಲಿ. ಮೂರನೆಯದಾಗಿ, ಅವರಿಗೆ ಈಗಲೂ ನಂಬಿಕೆ ಬರದಿದ್ದರೆಸಂಪೂರ್ಣ ಭದ್ರತೆ ಸಲುವಾಗಿ ಹೊರ ಜಗತ್ತಿನಿಂದ ದೂರ ಉಳಿಯಲಿ ಹಾಗೂಸಂವಹನಕ್ಕಾಗಿ ಆಧುನಿಕ ಸಾಧನಗಳನ್ನು ಬಳಸುವುದನ್ನು ನಿಲ್ಲಸಲಿ’ ಎಂದು ತಿರುಗೇಟು ನೀಡಿದ್ದಾರೆ.

ADVERTISEMENT

ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಮೊಬೈಲ್‌ ಫೋನ್‌ ಮಾತುಕತೆ ಕದ್ದಾಲಿಕೆಯಾಗುತ್ತಿರುವ ಬಗ್ಗೆ ನಿರಂತರವಾಗಿ ಅನುಮಾನ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಭದ್ರತೆಯ ದೃಷ್ಟಿಯಿಂದ ನಿಯಮಿತವಾಗಿ ಕಚೇರಿಯ ಲ್ಯಾಂಡ್‌ಲೈನ್‌ ಬಳಸುವಂತೆ ಅವರಿಗೆ ಹೇಳಲಾಗಿತ್ತು. ಆದಾಗ್ಯೂ ಟ್ರಂಪ್‌ ತಮ್ಮ ಹ್ಯಾಂಡ್‌ಸೆಟ್‌ ಬಳಕೆ ನಿಲ್ಲಿಸಿರಲಿಲ್ಲ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿತ್ತು.

ಹಲವು ಮಂದಿ ಮಾಜಿ ಅಧಿಕಾರಿಗಳು ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಸಿದ್ದ ಅಮೆರಿಕ ಗುಪ್ತಚರ ಇಲಾಖೆ, ಅಮೆರಿಕ ಜತೆಗಿನ ವಾಣಿಜ್ಯ ಸಮರವನ್ನು ಮುಂದುವರಿಸುವ ಸಲುವಾಗಿ ಚೀನಾ ಹಾಗೂ ರಷ್ಯಾ ಟ್ರಂಪ್‌ ಅವರ ಫೋನ್‌ ಕರೆ ಕದ್ದಾಲಿಸುತ್ತಿವೆ ಎಂದು ಹೇಳಿತ್ತು. ಇದರ ಆಧಾರದಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.