ಹೇಗ್ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮಂಗಳವಾರ ನೆದರ್ಲೆಂಡ್ಸ್ ಪ್ರಧಾನಿ ಡಿಕ್ ಸ್ಕೂಫ್ ಅವರನ್ನು ಭೇಟಿಯಾಗಿದ್ದು, ಭಯೋತ್ಪಾದನೆ ವಿರುದ್ಧ ದೃಢ ನಿಲುವು ತೆಗೆದುಕೊಂಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಜೈಶಂಕರ್ ಇಲ್ಲಿಗೆ ಭೇಟಿ ನೀಡಿದ್ದಾರೆ. ಡೆನ್ಮಾರ್ಕ್ ಮತ್ತು ಜರ್ಮನಿಗೂ ಅವರು ಭೇಟಿ ನೀಡಲಿದ್ದಾರೆ. ಪಾಕ್ ವಿರುದ್ಧ ಭಾರತದ ಸೇನಾ ಸಂಘರ್ಷದ ಬಳಿಕ ಇದು ಜೈಶಂಕರ್ ಅವರ ಮೊದಲ ವಿದೇಶ ಪ್ರವಾಸವಾಗಿದೆ.
‘ನೆದರ್ಲೆಂಡ್ಸ್ ಪ್ರಧಾನಿ ಭೇಟಿ ಖುಷಿ ನೀಡಿತು’ ಎಂದು ಜೈಶಂಕರ್ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
‘ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇನೆ. ಭಾರತ–ಪಾಕ್ ಸಂಘರ್ಷ ಮತ್ತೆ ವಿಷಮಗೊಳ್ಳದಿರುವುದರಿಂದ ಉಭಯ ದೇಶಗಳಿಗೂ ಒಳಿತಾಗುತ್ತದೆ’ ಎಂದು ನೆದರ್ಲೆಂಡ್ಸ್ ಪ್ರಧಾನಿ ಡಿಕ್ ಸ್ಕೂಫ್ ‘ಎಕ್ಸ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.