ಬಹುಮಹಡಿ ಕಟ್ಟಡ ಧರೆಗುರುಳಿ ಧೂಳು ಎಬ್ಬಿಸಿದ ದೃಶ್ಯ
ಪಿಟಿಐ ಚಿತ್ರ
ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ.
ಭೂಕಂಪದ ತೀವ್ರತೆಗೆ ಬ್ಯಾಂಕಾಕ್‌ನ ಬಹುಮಹಡಿ ಕಟ್ಟಡವು ಧರೆಗುರುಳಿ ಧೂಳು ಎಬ್ಬಿಸಿದ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಜನರ ಚೀರಾಟ, ಸುರಕ್ಷಿತ ಸ್ಥಳ ಅರಸಿ ಓಡುತ್ತಿರುವ ದೃಶ್ಯ ಹೃದಯ ಕಲಕುವಂತಿದೆ.
ಮ್ಯಾನ್ಮಾರ್‌ನ ಮಂಡಲೆ ಬಳಿ 90 ವರ್ಷ ಹಳೆಯ ಸೇತುವೆ ಕುಸಿದಿದೆ. ಇದು ಮಂಡಲೆ ಮತ್ತು ಮ್ಯಾನ್ಮಾರ್‌ನ ಪ್ರಮುಖ ನಗರ ಯಾನ್ಗಾಂಗ್‌ಗೆ ಸಂಪರ್ಕ ಕಲ್ಪಿಸುತ್ತಿತ್ತು.
ಭೀಕರ ಭೂಕಂಪದ ದೃಶ್ಯಗಳ ವಿಡಿಯೊಗಳು ಇಲ್ಲಿವೆ ನೋಡಿ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.