ADVERTISEMENT

ಈಸ್ಟರ್‌ ದಾಳಿ: ಮೂವರು ಶ್ರೀಲಂಕಾದವರ ವಿರುದ್ಧ ಮೊಕದ್ದಮೆ

ಲಾಸ್‌ಏಂಜಲೀಸ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು

ಪಿಟಿಐ
Published 9 ಜನವರಿ 2021, 7:29 IST
Last Updated 9 ಜನವರಿ 2021, 7:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: 2019ರಲ್ಲಿ ಈಸ್ಟರ್‌ ಚರ್ಚ್‌ಗಳ ಮೇಲೆ ದಾಳಿ ನಡೆಸಿದ ಐಎಸ್‌ ಬೆಂಬಲಿಗರ ಗುಂಪಿನ ಭಾಗವಾಗಿದ್ದಾರೆ ಎಂದು ಆರೋಪಿಸಿ ಅಮೆರಿಕ ಸರ್ಕಾರವು ಮೂವರು ಶ್ರೀಲಂಕಾ ಪ್ರಜೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ.

ಮೊಹಮ್ಮದ್ ನೌಫರ್, ಮೊಹಮ್ಮದ್ ಅನ್ವರ್ ಮೊಹಮ್ಮದ್ ರಿಸ್ಕಾನ್ ಮತ್ತು ಅಹಮದ್ ಮಿಲ್ಹಾನ್ ಹಯಾತು ಮೊಹಮ್ಮದ್ ಮೇಲೆ ಲಾಸ್‌ ಏಂಜಲೀಸ್‌ನಲ್ಲಿ ಕ್ರಿಮನಲ್ ಮೊಕದ್ದಮೆ ದಾಖಲಿಸಲಾಗಿದೆ. ಪ್ರಸ್ತುತ ಈ ಮೂವರು ಶ್ರೀಲಂಕಾದಲ್ಲಿ ಬಂಧನದಲ್ಲಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನೌಫರ್, ಶ್ರೀಲಂಕಾದಲ್ಲಿರುವ ಐಸಿಸ್ ಬೆಂಬಲಿಗರ ಗುಂಪಿನಲ್ಲಿರುವ ಪ್ರಮುಖ ವ್ಯಕ್ತಿ. ಐಎಸ್‌ಗೆ ಸೇರಲು ಜನರನ್ನು ಪ್ರಚೋದಿಸುವುದು, ಮಿಲಿಟರಿ ಮಾದರಿ ತರಬೇತಿ ನೀಡುವಂತಹ ಕೆಲಸಗಳನ್ನು ಮಾಡುತ್ತಿದ್ದನೆಂದು ಆರೋಪಿಸಲಾಗಿದೆ.

ADVERTISEMENT

ಈಸ್ಟರ್ ದಾಳಿಯಲ್ಲಿ ಬಳಸಿದ ಐಇಡಿಗಳನ್ನು ತಯಾರಿಸಲು ರಿಸ್ಕನ್ ಸಹಾಯ ಮಾಡಿದ್ದಾನೆಂದು ಆರೋಪಿಸಲಾಗಿದೆ.

2019ರ ಏಪ್ರಿಲ್‌ನಲ್ಲಿ ಶ್ರೀಲಂಕಾದಲ್ಲಿ ಈಸ್ಟರ್‌ ಸಂಡೆಯಂದು ಚರ್ಚ್‌ಗಳಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಐಎಸ್‌ ಉಗ್ರರು ದಾಳಿ ನಡೆಸಿದ್ದರು. ಇದರಲ್ಲಿ ಐವರು ಅಮೆರಿಕನ್ನರೂ ಸೇರಿದಂತೆ 268 ಜನರು ಮೃತಪಟ್ಟಿದ್ದರು‘ ಎಂದು ರಾಷ್ಟ್ರೀಯ ಭದ್ರತಾ ಸಹಾಯಕ ಅಟಾರ್ನಿ ಜನರಲ್ ಜಾನ್ ಸಿ ಡಿಮರ್ಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.