ADVERTISEMENT

ನೊಬೆಲ್‌ ಪ್ರಶಸ್ತಿ 2021: ಮೂವರು ತಜ್ಞರಿಗೆ ಅರ್ಥಶಾಸ್ತ್ರ ನೊಬೆಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2021, 10:35 IST
Last Updated 11 ಅಕ್ಟೋಬರ್ 2021, 10:35 IST
ಅರ್ಥಶಾಸ್ತ್ರ ನೊಬೆಲ್‌ಗೆ ಆಯ್ಕೆಯಾಗಿರುವ ತಜ್ಞರು
ಅರ್ಥಶಾಸ್ತ್ರ ನೊಬೆಲ್‌ಗೆ ಆಯ್ಕೆಯಾಗಿರುವ ತಜ್ಞರು   

ಸ್ಟಾಕ್‌ಹೋಮ್‌: 2021ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಮಂಗಳವಾರ ಘೋಷಣೆಯಾಗಿದೆ. ಡೇವಿಡ್‌ ಕಾರ್ಡ್‌ ಹಾಗೂ ಜೋಶುವಾ ಡಿ.ಅಂಗ್ರಿಸ್ಟ್‌ ಮತ್ತು ಗ್ವಿಡೊ ಡಬ್ಲ್ಯು ಇಂಬೆನ್ಸ್‌ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಾರ್ಮಿಕರ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಗಳಿಗೆಡೇವಿಡ್‌ ಕಾರ್ಡ್‌ ಅವರಿಗೆ ನೊಬೆಲ್‌ ಸಂದಿದೆ. ಪ್ರಶಸ್ತಿಯಲ್ಲಿ ಅರ್ಧ ಭಾಗ ಡೇವಿಡ್‌ ಅವರಿಗೆ ಹಾಗೂ ಉಳಿದಾರ್ಧ ಪ್ರಶಸ್ತಿ ಮೊತ್ತವುಜೋಶುವಾ ಮತ್ತು ಗ್ವಿಡೊ ಅವರಿಗೆ ಹಂಚಿಕೆಯಾಗಲಿದೆ.

* ಡೇವಿಡ್‌ ಕಾರ್ಡ್‌, ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ, ಅಮೆರಿಕ
* ಜೋಶುವಾ ಡಿ.ಅಂಗ್ರಿಸ್ಟ್‌, ಮಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಅಮೆರಿಕ
* ಗ್ವಿಡೊ ಡಬ್ಲ್ಯು ಇಂಬೆನ್ಸ್‌, ಸ್ಟ್ಯಾನ್‌ಫೋರ್ಡ್‌ ಯೂನಿವರ್ಸಿಟಿ, ಅಮೆರಿಕ

ADVERTISEMENT

2019ರಲ್ಲಿ ಭಾರತ ಮೂಲದ ಅಭಿಜಿತ್‌ ಬ್ಯಾನರ್ಜಿ (58), ಅವರ ಹೆಂಡತಿ ಎಸ್ತರ್‌ ಡಫ್ಲೊ (46) ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.