ADVERTISEMENT

ಬಿಯರ್ ಕಂಪನಿಗೆ ರಾಯಭಾರಿ ಆಗಿದ್ದ ಆನೆ ‘ಕ್ರೇಗ್‌’ ಸಾವು; ದಂತಗಳಿಂದಲೇ ಹೆಸರುವಾಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2026, 7:46 IST
Last Updated 6 ಜನವರಿ 2026, 7:46 IST
<div class="paragraphs"><p>ಆನೆ ಕ್ರೇಗ್</p></div>

ಆನೆ ಕ್ರೇಗ್

   

ಚಿತ್ರಕೃಪೆ: X/@Amboselinp

ಕೀನ್ಯಾ: ತನ್ನ ಉದ್ದನೆಯ ದಂತಗಳಿಗೆ ಹೆಸರುವಾಸಿಯಾದ ಆನೆ ಕ್ರೇಗ್‌, ನೈಸರ್ಗಿಕ ಕಾರಣಗಳಿಂದ ಶನಿವಾರ(ಜ.3) ಬೆಳಿಗ್ಗೆ ಮೃತಪಟ್ಟಿದೆ ಎಂದು ಅಂಬೋಸೆಲಿ ರಾಷ್ಟ್ರೀಯ ಉದ್ಯಾನವನ ತಿಳಿಸಿದೆ.

ADVERTISEMENT

ಕ್ರೇಗ್‌, ಆಫ್ರಿಕಾದ ನೈಸರ್ಗಿಕ ಪರಂಪರೆಯ ಜೀವಂತ ಸ್ಮಾರಕ ಎಂದು ಅದು ತನ್ನ ವಿದಾಯ ಸಂದೇಶದಲ್ಲಿ ಬಣ್ಣಿಸಿದೆ.

‘ಇತ್ತೀಚೆಗಷ್ಟೇ ಕ್ರೇಗ್‌ 54 ವರ್ಷಕ್ಕೆ ಕಾಲಿಟ್ಟಿತ್ತು. ಉತ್ತಮ ಆರೋಗ್ಯ, ಗಟ್ಟಿಮುಟ್ಟಾದ ದೇಹ ಹೊಂದಿದ್ದ ಅದು ಅನೇಕ ಮರಿಗಳಿಗೆ ತಂದೆಯಾಗಿದೆ’ ಎಂದು ಪ್ರಾಣಿ ಸಂರಕ್ಷಣಾ ತಜ್ಞರು ಹೇಳಿದ್ದಾರೆ.

ದಂತಗಳಿಂದ ಜನಪ್ರಿಯತೆ ಪಡೆದಿದ್ದ ಕ್ರೇಗ್‌ನನ್ನು ನೋಡಲು ಜಗತ್ತಿನಾದ್ಯಂತ ಅನೇಕರು ಕೀನ್ಯಾಕ್ಕೆ ಬರುತ್ತಿದ್ದರು. 2021ರಲ್ಲಿ ‘ಈಸ್ಟ್‌ ಆಫ್ರಿಕನ್‌ ಬ್ರೂವರೀಸ್’ ಬಿಯರ್ ಕಂಪನಿಯು ತನ್ನ ‘ಟಸ್ಕರ್‌’ ಬ್ರ್ಯಾಂಡ್‌ಗೆ ಕ್ರೇಗ್‌ ಅನ್ನು ರಾಯಭಾರಿಯಾಗಿ ಹೆಸರಿಸಿತ್ತು.

ಶಾಂತ ಸ್ವಭಾವದಿಂದ ಎಲ್ಲರ ಪ್ರೀತಿಗೆ ಪಾತ್ರವಾಗುತ್ತಿದ್ದ ಆನೆ ಕ್ರೇಗ್‌, ಪ್ರವಾಸಿಗರು ಫೋಟೊ, ವಿಡಿಯೊಗಳನ್ನು ತೆಗೆಯುವಾಗ ತಾಳ್ಮೆಯಿಂದ ವರ್ತಿಸುತ್ತಿರುವುದನ್ನು ಸಂಸ್ಥೆ ನೆನಪಿಸಿಕೊಂಡಿದೆ.

ಉಳಿದಿರುವ ಕೆಲವೇ ಕೆಲವು ಸೂಪರ್‌ ಟಸ್ಕರ್‌ ಆನೆಗಳಲ್ಲಿ ಕ್ರೇಗ್ ಒಂದಾಗಿತ್ತು. ಅಪರೂಪದ ಬುಲ್‌ ವರ್ಗಕ್ಕೆ ಸೇರುವ ಕ್ರೇಗ್‌ನ ಒಂದೊಂದು ದಂತವು 45 ಕೆ.ಜಿ ತೂಗುತ್ತಿತ್ತು.

ಕಳೆದ ವರ್ಷ 20 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕೀನ್ಯಾಕ್ಕೆ ಭೇಟಿ ನೀಡಿದ್ದು, ಅವರಲ್ಲಿ ಹೆಚ್ಚಿನವರು ಅಂಬೋಸೆಲಿ ಭೇಟಿ ನೀಡಿದ್ದರು. ಇದು ಕ್ರೇಗ್‌ನ ಜನಪ್ರಿಯತೆಗೆ ನಿದರ್ಶನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.