ಲಂಡನ್: ಇಲ್ಲಿಂದ 72 ಕಿ.ಮೀ ದೂರದಲ್ಲಿರುವ ಸೌತ್‌ಎಂಡ್ ವಿಮಾನ ನಿಲ್ದಾಣದಲ್ಲಿ ಸಣ್ಣ ವಿಮಾನವೊಂದು ಭಾನುವಾರ ಅಪಘಾತಕ್ಕೀಡಾಗಿದೆ.
ವಿಮಾನ ಎಲ್ಲಿಗೆ ಹೊರಟಿತ್ತು, ಅದರಲ್ಲಿ ಎಷ್ಟು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂಬುದರ ವಿವರಗಳು ತಕ್ಷಣಕ್ಕೆ ತಿಳಿದುಬಂದಿಲ್ಲ. ಅಪಘಾತ ಸಂಭವಿಸಿದ ಸ್ಥಳಕ್ಕೆ ತುರ್ತು ಸೇವಾ ತಂಡಗಳು ಧಾವಿಸಿ, ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದವು.
ಅಪಘಾತಕ್ಕೀಡಾದ ವಿಮಾನವು ಸುಮಾರು 12 ಮೀಟರ್ (39 ಅಡಿ) ಉದ್ದವಿತ್ತು ಎಂದು ಮೂಲಗಳು ತಿಳಿಸಿವೆ. ವಿಮಾನ ಪತನವಾದ ಬಳಿಕ ಭಾರಿ ಪ್ರಮಾಣದಲ್ಲಿ ಕಪ್ಪು ಹೊಗೆ ಆವರಿಸಿತ್ತು. ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಪ್ರತ್ಯಕ್ಷದರ್ಶಿ ಜಾನ್ ಜಾನ್ಸನ್ ಅವರ ಪ್ರಕಾರ, ‘ವಿಮಾನವು ಮೊದಲು ತಲೆಕೆಳಗಾಗಿ ನೆಲಕ್ಕೆ ಅಪ್ಪಳಿಸಿತು. ಬಳಿಕ ಅಲ್ಲಿಂದ ದೊಡ್ಡ ಬೆಂಕಿಯ ಉಂಡೆ ಕಂಡುಬಂದಿತು’ ಎಂದಿದ್ದಾರೆ.
‘ವಿಮಾನವು ಟೇಕ್‌ಆಫ್ ಆದ ಮೂರರಿಂದ ನಾಲ್ಕು ಸೆಕೆಂಡುಗಳಲ್ಲಿ ಎಡ ಭಾಗಕ್ಕೆ ಬಾಗಿತು. ನಂತರ ಕೆಲ ಸೆಕೆಂಡುಗಳಲ್ಲಿಯೇ ತಲೆಕೆಳಗಾಗಿ ನೆಲಕ್ಕೆ ಅಪ್ಪಳಿಸಿತು’ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.