ADVERTISEMENT

ಇಸ್ರೇಲ್‌: ರಾಜಕೀಯ ಚಟುವಟಿಕೆ ಬಿರುಸು, ಪ್ರಧಾನಿ ನೆತನ್ಯಾಹು ಯುಗಾಂತ್ಯ ಸನ್ನಿಹಿತ

ರಾಯಿಟರ್ಸ್
Published 30 ಮೇ 2021, 9:18 IST
Last Updated 30 ಮೇ 2021, 9:18 IST
ಬೆಂಜಮಿನ್ ನೆತನ್ಯಾಹು
ಬೆಂಜಮಿನ್ ನೆತನ್ಯಾಹು   

ಜೆರುಸಲೇಂ: ಇಸ್ರೇಲ್‌ನಲ್ಲಿ ರಾಜಕೀಯ ಬಿರುಸುಗೊಂಡಿದ್ದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ 12 ವರ್ಷಗಳ ಅಧಿಕಾರ ಕೊನೆಗೊಳ್ಳುವ ಲಕ್ಷಣಗಳು ಕಾಣಿಸಿವೆ.

ಎರಡು ವರ್ಷಗಳಲ್ಲಿ ನಾಲ್ಕು ಬಾರಿ ನಡೆದ ಸಂಸತ್‌ ಚುನಾವಣೆಯ ಬಳಿಕ, ವಿರೋಧ ಪಕ್ಷದ ನಾಯಕ ಯೇರ್‌ ಲ್ಯಾಪಿಡ್‌ ಅವರಿಗೆ ಹೊಸ ಸರ್ಕಾರ ರಚಿಸಲು 28 ದಿನಗಳ ಅವಕಾಶ ದೊರೆತಿತ್ತು. ಅದು ಬುಧವಾರ ಕೊನೆಯಾಗಲಿದ್ದು, ಲ್ಯಾಪಿಡ್‌ ಅವರು ಮಿತ್ರ ಪಕ್ಷಗಳ ಜತೆಗೂಡಿ ಕೂಟ ರಚಿಸಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಲ್ಯಾಪಿಡ್ ಅವರ ಯಶಸ್ಸಿನ ಸಾಧ್ಯತೆಗಳು ಹೆಚ್ಚಾಗಿ ಬಲಪಂಥೀಯ ರಾಜಕಾರಣಿ ನಫ್ತಾಲಿ ಬೆನೆಟ್ (ಮಾಜಿ ರಕ್ಷಣಾ ಸಚಿವ) ಅವರನ್ನು ಅವಲಂಬಿಸಿದೆ.

ADVERTISEMENT

ಬೆನೆಟ್‌ ಅವರು ಯಮಿನಾ ಪಕ್ಷದ ಮುಖ್ಯಸ್ಥರಾಗಿದ್ದು, ಆರು ಸಂಸದರನ್ನು ಹೊಂದಿದ್ದಾರೆ. ಹೊಸ ಸರ್ಕಾರ ರಚನೆಯಲ್ಲಿ ‘ಕಿಂಗ್‌ ಮೇಕರ್‌’ ಆಗಲಿದ್ದಾರೆ ಎಂದು ವರದಿಗಳು ಹೇಳಿವೆ.

ಯಶ್‌ ಅತಿದ್‌ ಪಕ್ಷದ ನಾಯಕ ಲ್ಯಾಪಿಡ್‌ ಅವರಿಗೆ ಬೆನೆಟ್‌ ಬೆಂಬಲ ಸೂಚಿಸುತ್ತಾರೆಯೇ ಎಂಬುದು ಶೀಘ್ರದಲ್ಲಿಯೇ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.