ADVERTISEMENT

ಕ್ಯೂಬಾ: ಕಮ್ಯುನಿಸ್ಟ್‌ ಪಕ್ಷದ ಮುಖ್ಯಸ್ಥ ಸ್ಥಾನಕ್ಕೆ ರೌಲ್ ಕ್ಯಾಸ್ಟ್ರೊ ರಾಜೀನಾಮೆ

ಏಜೆನ್ಸೀಸ್
Published 17 ಏಪ್ರಿಲ್ 2021, 7:42 IST
Last Updated 17 ಏಪ್ರಿಲ್ 2021, 7:42 IST
ರೌಲ್ ಕ್ಯಾಸ್ಟ್ರೊ
ರೌಲ್ ಕ್ಯಾಸ್ಟ್ರೊ   

ಹವಾನ: ಕ್ಯೂಬಾ ಕಮ್ಯುನಿಸ್ಟ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರೌಲ್ ಕ್ಯಾಸ್ಟ್ರೊ ಘೋಷಿಸಿದ್ದಾರೆ.

ಯುವ ಸದಸ್ಯರ ಕೈಗೆ ಪಕ್ಷದ ಜವಾಬ್ದಾರಿಯನ್ನು ವಹಿಸುವ ಇಂಗಿತವನ್ನು ರೌಲ್‌ ವ್ಯಕ್ತಪಡಿಸಿದ್ದಾರೆ.

89 ವರ್ಷದ ರೌಲ್ ಕ್ಯಾಸ್ಟ್ರೊ ಶುಕ್ರವಾರ ಇಲ್ಲಿ ನಡೆದ ಕಮ್ಯುನಿಸ್ಟ್ ಪಕ್ಷದ ಎಂಟನೇ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ನಾನು ಪಕ್ಷದ ಮೊದಲ ಕಾರ್ಯದರ್ಶಿಯಾಗಿ ನನ್ನ ಕಾರ್ಯವನ್ನು ಪೂರ್ಣಗೊಳಿಸಿದ್ದೇನೆ. ಇಷ್ಟು ದಿನಗಳ ಕಾಲ ತೃಪ್ತಿಯೊಂದಿಗೆ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈ ದ್ವೀಪ ರಾಷ್ಟ್ರದ ಭವಿಷ್ಯದ ಬಗ್ಗೆ ವಿಶ್ವಾಸವಿದೆ‘ ಎಂದು ಹೇಳಿದರು.

ತಮ್ಮ ನಂತರ ಕಾರ್ಯದರ್ಶಿ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕ್ಯಾಸ್ಟ್ರೋ ಹೇಳಲಿಲ್ಲ. ಆದರೆ ಈ ಹಿಂದೆ ಅವರು 2018 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ 60 ವರ್ಷದ ಮಿಗುಯೆಲ್ ಡಿಯಾಜ್-ಕ್ಯಾನೆಲ್ ಅವರತ್ತ ಒಲವು ತೋರುತ್ತಿದ್ದರು. ‘ಮಿಗುಯೆಲ್ ಅವರು ಯುವ ಪೀಳಿಗೆಯ ನಿಷ್ಠಾವಂತರ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ‘ ಎಂದು ಅವರು ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.