ADVERTISEMENT

ಆಫ್ಗನ್‌ನಲ್ಲಿ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟು; ವಿಶ್ವಸಂಸ್ಥೆ ಎಚ್ಚರಿಕೆ

ಈ ವರ್ಷ ಅಭದ್ರತೆ, ಹಿಂಸಾಚಾರದಿಂದ 2.70 ಲಕ್ಷ ಆಫ್ಗನ್ನರ ಸ್ಥಳಾಂತರ

ಪಿಟಿಐ
Published 14 ಜುಲೈ 2021, 6:05 IST
Last Updated 14 ಜುಲೈ 2021, 6:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ಅಭದ್ರತೆ ಮತ್ತು ಹಿಂಸಾಚಾರದ ಕಾರಣದಿಂದಾಗಿ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಹೊಸದಾಗಿ 2.70 ಲಕ್ಷ ಆಫ್ಗನ್ನರು ದೇಶದಿಂದ ಸ್ಥಳಾಂತರಗೊಂಡಿರುವುದಾಗಿ ಹೇಳಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗ(ಯುಎನ್‌ಎಚ್‌ಸಿಆರ್‌), ಅಭದ್ರತೆಯ ಕಾರಣದ ಆಫ್ಗಾನಿಸ್ತಾನದಲ್ಲಿ ಮಾನವೀಯತೆಯ ಬಿಕ್ಕಟ್ಟು ತೀವ್ರವಾಗುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಿದೆ.

ಅಫ್ಗಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿದ ನಂತರ, ತಾಲಿಬಾನಿಗಳು ವೇಗವಾಗಿ ಆಫ್ಗನ್‌ನ ಹೆಚ್ಚಿನ ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಕಾರಣ, ಅಲ್ಲೀಗ ಅಭದ್ರತೆಯ ವಾತಾವರಣ ಸೃಷ್ಟಿಯಾಗುತ್ತಿದೆ.

’ಸಂಘರ್ಷಗಳು ಹೆಚ್ಚಾಗುತ್ತಿರುವ ಕಾರಣ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದು, ನಾಗರಿಕರ ಸ್ಥಳಾಂತರವೂ ಹೆಚ್ಚುತ್ತಿದೆ. ಇದು ಆಫ್ಗಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ತೀವ್ರವಾಗುತ್ತಿರುವುದರ ಎಚ್ಚರಿಕೆಯ ಗಂಟೆಯಾಗಿದೆ’ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಹೈ ಕಮಿಷನರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.