ADVERTISEMENT

ಸಿರಿಯಾ ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಫೋಟ: 12 ಮಕ್ಕಳು ಸೇರಿ 39 ಮಂದಿ ಸಾವು

ಏಜೆನ್ಸೀಸ್
Published 12 ಆಗಸ್ಟ್ 2018, 15:04 IST
Last Updated 12 ಆಗಸ್ಟ್ 2018, 15:04 IST
ಸ್ಫೋಟಕ್ಕೆ ಕಟ್ಟಡಗಳು ನೆಲಸಂವಾಗಿವೆ. ಚಿತ್ರ: ಎಎಫ್‌ಪಿ ಟ್ವಿಟ್‌
ಸ್ಫೋಟಕ್ಕೆ ಕಟ್ಟಡಗಳು ನೆಲಸಂವಾಗಿವೆ. ಚಿತ್ರ: ಎಎಫ್‌ಪಿ ಟ್ವಿಟ್‌   

ಬೈರುತ್‌:ವಾಯುವ್ಯ ಸಿರಿಯಾ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಭಾನುವಾರ ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಫೋಟಗೊಂಡಿದ್ದು, 12 ಮಕ್ಕಳು ಸೇರಿ 39 ನಾಗರಿಕರು ಮೃತಪಟ್ಟಿದ್ದಾರೆ ಎಂದು ಇಲ್ಲಿನಯುದ್ಧ ವೀಕ್ಷಕರು ಹೇಳಿದ್ದಾರೆ.

ಸರ್ಮದಾ ಪಟ್ಟಣದಲ್ಲಿನ ಕಟ್ಟಡದ ಸ್ಥಳವೊಂದರಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಎರಡು ಕಟ್ಟಡಗಳು ನೆಲಸಮವಾಗಿವೆ.

ಕಟ್ಟಡದ ಅವಶೇಷಗಳ ಅಡಿ ಸಿಲುಕಿರುವವರನ್ನು ಹೊರ ತೆಗೆಯುವ ಕಾರ್ಯಾಚರಣೆನಡೆಯುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹದು ಎಂದು ಸಿರಿಯಾದಲ್ಲಿನ ಮಾನವ ಹಕ್ಕುಗಳ ವೀಕ್ಷಕರುಹೇಳಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.