ADVERTISEMENT

ಅಳಿವಿನಂಚಿನಲ್ಲಿ ‘ಕಾಂಗರೂ ಇಲಿ’

ಏಜೆನ್ಸೀಸ್
Published 7 ಡಿಸೆಂಬರ್ 2018, 17:30 IST
Last Updated 7 ಡಿಸೆಂಬರ್ 2018, 17:30 IST
ಕಾಂಗರೂ ಇಲಿ
ಕಾಂಗರೂ ಇಲಿ   

ಸಿಡ್ನಿ: ಕಾಂಗರೂ ರೀತಿ ಹೊಟ್ಟೆಚೀಲ ಹಾಗೂ ನೆಗೆಯಲು ಹಿಂಗಾಲು ಹೊಂದಿರುವ ‘ಕಾಂಗರೂ ಇಲಿ’ಗಳ ಸಂತತಿ ಭಾರಿ ಪ್ರಮಾಣದಲ್ಲಿ ಕ್ಷೀಣಿಸಿದ್ದು, ಸಂರಕ್ಷಣೆಗೆ ಮುಂದಾಗದಿದ್ದರೆ ಅವುಗಳ ಪ್ರಭೇದವೇ ನಾಶವಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ಎಚ್ಚರಿಸಿದೆ.

ಕ್ವೀನ್ಸ್‌ಲ್ಯಾಂಡ್ ರಾಜ್ಯದ ಕರಾವಳಿಯ ಉಷ್ಣವಲಯದಲ್ಲಿ ಸುಮಾರು 2,500 ‘ಕಾಂಗರೂ ಇಲಿ’ಗಳು ಮಾತ್ರ ಉಳಿದಿವೆ ಎಂದು ಜಾಗತಿಕ ವನ್ಯಜೀವಿ ನಿಧಿ ಸಂಸ್ಥೆ ತಿಳಿಸಿದೆ. ಇವುಗಳ ಸಂಖ್ಯೆ ಕಳೆದ 30 ವರ್ಷಗಳ ಅವಧಿಯಲ್ಲಿ ಶೇ 70ರಷ್ಟು ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದೆ.

ಇಲಿಯಷ್ಟು ಗಾತ್ರದ, ರಾತ್ರಿ ವೇಳೆಯಲ್ಲಿ ಚಟುವಟಿಕೆಯಿಂದಿರುವ ಈ ಪ್ರಬೇಧವು ಕಾಡುಬೆಕ್ಕುಗಳಿಂದ ಬೇಟೆ ಹಾಗೂ ಪದೇಪದೇ ಕಾಣಿಸಿಕೊಳ್ಳುವ ಕಾಡ್ಗಿಚ್ಚಿನಿಂದ ಅಪಾಯ ಎದುರಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.