ವಾಷಿಂಗ್ಟನ್: ಭಾರತ 114 ಎಫ್21 ಯುದ್ಧ ವಿಮಾನಗಳ ಖರೀದಿಗೆ ಕಾರ್ಯಾದೇಶ ನೀಡಿದರೆ, ನೂತನವಾಗಿ ನಿರ್ಮಾಣಗೊಳಿಸಿರುವ ಎಫ್21 ಯುದ್ಧ ವಿಮಾನಗಳನ್ನು ಇತರೆ ಯಾವ ದೇಶಕ್ಕೂ ನೀಡುವುದಿಲ್ಲ ಎಂದು ಅಮೆರಿಕ ಏರೋಸ್ಪೇಸ್ ದಿಗ್ಗಜ ಲಾಕ್‌ಹೀಡ್ ಮಾರ್ಟಿನ್ ತಿಳಿಸಿದೆ.
ಯುರೋಪಿಯನ್ ಹಾಗೂ ರಷ್ಯಾದ ಏರೋಸ್ಪೇಸ್ ಪ್ರತಿಸ್ಪರ್ಧಿಗಳನ್ನು ಗುರಿಯಾಗಿರಿಸಿಕೊಂಡು ಲಾಕ್‌ಹೀಡ್ ಈ
ಪ್ರಸ್ತಾವ ಇರಿಸಿದೆ. ಕಳೆದ ತಿಂಗಳು ಭಾರತೀಯ ವಾಯುಸೇನೆ ಅಂದಾಜು₹1.26 ಲಕ್ಷ ಕೋಟಿ ವೆಚ್ಚದಲ್ಲಿ114 ಯುದ್ಧ ವಿಮಾನಗಳಿಗೆ ಪ್ರಾಥಮಿಕ ಹಂತದ ಟೆಂಡರ್ ಆಹ್ವಾನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.