ADVERTISEMENT

ನೂರಕ್ಕೂ ಅಧಿಕ ಫೇಸ್‌ಬುಕ್‌ ಪೇಜ್‌, ಖಾತೆ ರದ್ದು

ರಾಯಿಟರ್ಸ್
Published 4 ಅಕ್ಟೋಬರ್ 2019, 20:15 IST
Last Updated 4 ಅಕ್ಟೋಬರ್ 2019, 20:15 IST
ಫೇಸ್‌ಬುಕ್‌
ಫೇಸ್‌ಬುಕ್‌    

ಜಕಾರ್ತ:ಸಾಮಾಜಿಕ ಜಾಲತಾಣಗಳನ್ನು ದುಷ್ಕೃತ್ಯ, ದುರುದ್ದೇಶಕ್ಕಾಗಿ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿಇಂಡೊನೇಷ್ಯಾ, ಯುಎಇ, ಈಜಿಪ್ಟ್‌ ಮತ್ತು ನೈಜೀರಿಯಾದಲ್ಲಿ ನೂರಕ್ಕೂ ಅಧಿಕ ಪೇಜ್‌, ಗ್ರೂಪ್‌ ಹಾಗೂ ಖಾತೆಗಳನ್ನು ರದ್ದುಗೊಳಿಸಿರುವುದಾಗಿ ಫೇಸ್‌ಬುಕ್‌ ತಿಳಿಸಿದೆ.

ಇಂಡೊನೇಷ್ಯಾದಲ್ಲಿಪಶ್ಚಿಮ ಪಪುವಾ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿ ಅಥವಾ ಟೀಕಿಸಿ100ಕ್ಕೂ ಅಧಿಕ ನಕಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂಖಾತೆಗಳಲ್ಲಿಇಂಗ್ಲಿಷ್‌ ಮತ್ತು ಇಂಡೋನೇಷ್ಯನ್‌ ಭಾಷೆಯಲ್ಲಿ ವಿಷಯಗಳನ್ನು ಪ್ರಕಟಿಸಲಾಗುತ್ತಿತ್ತು. ‘ಈ ಖಾತೆಗಳನ್ನು ಸ್ಥಳೀಯ ಮಾಧ್ಯಮ ಸಂಸ್ಥೆಗಳಂತೆ ಗೋಚರಿಸುವಂತೆ ವಿನ್ಯಾಸಗೊಳಿಸಲಾಗಿತ್ತು’ ಎಂದು ಫೇಸ್‌ಬುಕ್‌ನ ‘ಥ್ರೆಟ್‌ ಡಿಸ್‌ರಪ್ಷನ್‌’(ಅಪಾಯ ತಡೆ) ಕಾರ್ಯಪಡೆಯ ಡೇವಿಡ್‌ ಅಗ್ರನೋವಿಚ್‌ ತಿಳಿಸಿದ್ದಾರೆ.

ಘರ್ಷಣೆಗೆ 33 ಜನರ ಸಾವು:‘ಇಂಡೊನೇಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಗಮನವಿರಿಸಲಾಗುತ್ತಿದ್ದು, ನಕಲಿ ಖಾತೆಗಳು ಜಾಹೀರಾತಿನ ಮೂಲಕ ಜನರನ್ನು ಸೆಳೆಯುತ್ತಿವೆ’ ಎಂದು ಡೇವಿಡ್‌ ತಿಳಿಸಿದ್ದಾರೆ.

ADVERTISEMENT

ಆಗಸ್ಟ್‌ನಿಂದ ಪಪುವಾದಲ್ಲಿ ಪ್ರತಿಭಟನೆ, ಘರ್ಷಣೆ ತೀವ್ರವಾಗಿದ್ದು, ಸೆಪ್ಟೆಂಬರ್‌ನಲ್ಲಿ ನಡೆದ ಘರ್ಷಣೆಯಲ್ಲಿ 33 ಜನ ಮೃತಪಟ್ಟು, ಸಾವಿರಾರು ಜನ ಗಾಯಗೊಂಡಿದ್ದರು. ನಕಲಿ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಗಳು ಹೆಚ್ಚುತ್ತಿರುವ ಬಗ್ಗೆ ಸಂಶೋಧಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಈ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.