ADVERTISEMENT

ಗ್ರೀನ್‌ಲ್ಯಾಂಡ್‌ ಮಾರಾಟಕ್ಕಿಲ್ಲ; ಡೆನ್ಮಾರ್ಕ್‌ ಬೆಂಬಲಿಸಿ: ಫ್ರೆಡೆರಿಕ್‌ಸೆನ್‌

ಏಜೆನ್ಸೀಸ್
Published 3 ಫೆಬ್ರುವರಿ 2025, 13:43 IST
Last Updated 3 ಫೆಬ್ರುವರಿ 2025, 13:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬ್ರುಸೆಲ್ಸ್‌: ‘ಗ್ರೀನ್‌ಲ್ಯಾಂಡ್‌ ಮಾರಾಟಕ್ಕಿಲ್ಲ’ ಎಂದು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್‌ ಸೋಮವಾರ ಇಲ್ಲಿ ಪುನರುಚ್ಚರಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದ್ವೀಪವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾದರೆ, ಐರೋಪ್ಯ ಒಕ್ಕೂಟವು ನಮ್ಮನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡರು.

ADVERTISEMENT

‘ಮಿತ್ರರ ವಿರುದ್ಧವೇ ಹೋರಾಟ ನಡೆಸುವುದು ನನಗೆ ಇಷ್ಟವಿಲ್ಲ. ಆದರೆ, ಅಮೆರಿಕವು ಕಠಿಣ ನಿಬಂಧನೆ ವಿಧಿಸಲು ಮುಂದಾದರೆ, ನಮಗೆ ಬೆಂಬಲ ಬೇಕಾಗಬಹುದು’ ಎಂದು ತಿಳಿಸಿದರು.

ದೀರ್ಘ ಕಾಲದಿಂದಲೂ ಮಿತ್ರರಾಷ್ಟ್ರವಾಗಿರುವ ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾದ ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕವು ಮಿಲಿಟರಿ ನೆಲೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.