ADVERTISEMENT

ಕೋವ್ಯಾಕ್ಸಿನ್‌: 2, 3ನೇ ಹಂತದ ಕ್ಲಿನಿಕಲ್‌ ಪ್ರಯೋಗಕ್ಕೆ ಅಮೆರಿಕ ತಡೆ

ಪಿಟಿಐ
Published 14 ಏಪ್ರಿಲ್ 2022, 14:29 IST
Last Updated 14 ಏಪ್ರಿಲ್ 2022, 14:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ಭಾರತದ ಭಾರತ್‌ ಬಯೊಟೆಕ್‌ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ‘ಕೋವ್ಯಾಕ್ಸಿನ್’ನ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು ತಡೆ ನೀಡಿದೆ.

ಭಾರತದಲ್ಲಿ ಇರುವ ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದನಾ ಘಟಕಗಳನ್ನು ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಅಭಿಪ್ರಾಯಗಳನ್ನು ಆಧರಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಕೋವ್ಯಾಕ್ಸಿನ್‌ ಲಸಿಕೆಗೆ ಅಮೆರಿಕ, ಕೆನಡಾದಲ್ಲಿ ಭಾರತ್ ಬಯೊಟೆಕ್‌ ಪಾಲುದಾರರಾಗಿರುವ ಓಕುಜೆನ್‌ ಸಂಸ್ಥೆ ಈ ಬಗ್ಗೆ ಹೇಳಿಕೆ ನೀಡಿದ್ದು, ಭಾರತ್ ಬಯೊಟೆಕ್‌ ಉತ್ಪಾದನಾ ಘಟಕ ಪರಿಶೀಲಿಸಿ ಡಬ್ಲ್ಯೂಎಚ್ಒ ನೀಡಿದ ಅಭಿಪ್ರಾಯ ಆಧರಿಸಿ ಈ ಕ್ರಮ ವಹಿಸಲಾಗಿದೆ ಎಂದು ತಿಳಿಸಿದೆ.

ADVERTISEMENT

ಡಬ್ಲ್ಯೂಎಚ್ಒ ಇದಕ್ಕೂ ಮೊದಲು ಅಮೆರಿಕದ ಖರೀದಿ ಕೇಂದ್ರಗಳ ಮೂಲಕ ಕೋವ್ಯಾಕ್ಸಿನ್ ಲಸಿಕೆ ವಿತರಣೆಯನ್ನು ಅಮಾನತುಪಡಿಸಿತ್ತು.ಭಾರತ್‌ ಬಯೊಟೆಕ್‌ನ ಉತ್ಪಾದನಾ ಘಟಕಗಳಲ್ಲಿ ಉತ್ಪಾದನಾ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂದು ಡಬ್ಲ್ಯೂಎಚ್‌ಒ ಹೇಳಿತ್ತು.

ಭಾರತ್‌ ಬಯೊಟೆಕ್‌ನ ಮೂಲಗಳು, ಅಮೆರಿಕದ ಕ್ರಮದಿಂದ ಯಾವುದೇ ಪ್ರತಿಕೂಲ ಪರಿಣಾಮ ಆಗುವುದಿಲ್ಲ. ಅಮೆರಿಕದ ಸಂಸ್ಥೆಗಳಿಗೆ ತಾನು ಲಸಿಕೆಯನ್ನು ಪೂರೈಕೆ ಮಾಡಿಲ್ಲ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.